ಸೋಲಿನ ಹತಾಶೆಯಲ್ಲಿ ಕ್ಯಾಮರಾ ಟೆಕ್ನಿಷಿಯನ್ ಮೇಲೆ ಕೆಂಡ ಕಾರಿದ ರೋಹಿತ್ ಶರ್ಮಾ
ನಿನ್ನೆ ಪಂದ್ಯದ ಬಳಿಕ ನಿರೂಪಕರ ಮುಂದೆ ಮಾತನಾಡಲು ಬಂದಾಗ ರೋಹಿತ್ ಮುಖದಲ್ಲಿ ಹತಾಶೆ ಎದ್ದು ಕಾಣುತ್ತಿತ್ತು. ಇದರ ಜೊತೆಗೆ ನಿರೂಪಕರು ಕೇಳುವ ಪ್ರಶ್ನೆಯೂ ಪ್ರೇಕ್ಷಕರ ಸದ್ದಿಗೆ ಕೇಳದೇ ಹೋದಾಗ ರೋಹಿತ್ ಕೆಂಡಾ ಮಂಡಲರಾದರು.
ಕ್ಯಾಮರಾ ಟೆಕ್ನಿಷಿಯನ್ ಗೆ ಸೌಂಡ್ ಜಾಸ್ತಿ ಮಾಡೋ ಎಂದು ಕೂಗಾಡಿದರು. ಸಾಮಾನ್ಯವಾಗಿ ಕೂಲ್ ಆಗಿರುವ ರೋಹಿತ್ ಇದೀಗ ಮುಂಬೈ ಇಂಡಿಯನ್ಸ್ ಸತತ ಸೋಲಿನಿಂದ ಕಂಗೆಟ್ಟಿರುವುದು ಸ್ಪಷ್ಟವಾಗಿತ್ತು.