ಐಪಿಎಲ್ 2022: ಉತ್ಸಾಹೀ ಕೆಕೆಆರ್ ಗೆ ಮುಂಬೈ ಇಂಡಿಯನ್ಸ್

ಬುಧವಾರ, 6 ಏಪ್ರಿಲ್ 2022 (09:00 IST)
ಮುಂಬೈ: ಐಪಿಎಲ್ 2022 ರ ಇಂದಿನ ಪಂದ್ಯದಲ್ಲಿ ಗೆಲುವಿನ ಉತ್ಸಾಹದಲ್ಲಿರುವ ಕೋಲ್ಕೊತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವಾಡಲಿದೆ.

ಕೋಲ್ಕೊತ್ತಾ ಆಡಿದ ಮೂರು ಪಂದ್ಯಗಳ ಪೈಕಿ ಎರಡು ಗೆಲುವಿನೊಂದಿಗೆ ಆತ್ಮವಿಶ್ವಾಸದಲ್ಲಿದೆ. ಆದರೆ ಮುಂಬೈ ಇಂಡಿಯನ್ಸ್ ಗೆ ಇನ್ನೂ ಮೊದಲ ಜಯ ಸಿಕ್ಕಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ಚಾಂಪಿಯನ್ ತಂಡವೆನಿಸಿಕೊಂಡಿರುವ ಮುಂಬೈ ತನ್ನ ಖ್ಯಾತಿಗೆ ತಕ್ಕ ಬ್ಯಾಟಿಂಗ್ ಮತ್ತು ಬೌಲಿಂಗ್ ನಿರ್ವಹಣೆ ತೋರಬೇಕಿದೆ. ಇತ್ತ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಕೆಕೆಆರ್ ತಂಡ ಬಲಿಷ್ಠವಾಗಿದೆ. ಹೀಗಾಗಿ ಇದೊಂದು ರೀತಿಯಲ್ಲಿ ಸಮಬಲರ ಹೋರಾಟವೆನ್ನಬಹುದು. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ