ಐಪಿಎಲ್ 2022: ಕೆಕೆಆರ್ ವಿರುದ್ಧ ಲಕ್ನೋಗೆ ಭರ್ಜರಿ ಗೆಲುವು
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ನಾಯಕ ಕೆಎಲ್ ರಾಹುಲ್ ಶೂನ್ಯ ಸುತ್ತಿದರೆ, ಕ್ವಿಂಟನ್ ಡಿ ಕಾಕ್ 50, ದೀಪಕ್ ಹೂಡಾ 41, ಮಾರ್ಕ್ ಸ್ಟಾಯ್ನಿಸ್ 28 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ ಗೆ ಬ್ಯಾಟಿಂಗ್ ಕೈಕೊಟ್ಟಿತು. ಏರಾನ್ ಫಿಂಚ್ 14, ಆಂಡ್ರೆ ರಸೆಲ್ 45, ಸುನಿಲ್ ನರೈನ್ 22 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟಿಗರು ಎರಡಂಕಿಯನ್ನೂ ತಲುಪಲಿಲ್ಲ. ಇದರಿಂದಾಗಿ ಕೆಕೆಆರ್ 143 ಓವರ್ ಗಳಲ್ಲಿ 101 ರನ್ ಗೆ ಆಲೌಟ್ ಆಯಿತು. ಆವೇಶ್ ಖಾನ್, ಜೇಸನ್ ಹೋಲ್ಡರ್ ತಲಾ 3 ವಿಕೆಟ್ ಹಂಚಿಕೊಂಡರು.