ಐಪಿಎಲ್ ನಲ್ಲಿ ನನಗೆ ಗೌರವ ಸಿಗಲಿಲ್ಲ: ಕ್ರಿಸ್ ಗೇಲ್ ಆಕ್ರೋಶ

ಶನಿವಾರ, 7 ಮೇ 2022 (18:21 IST)
ಮುಂಬೈ: ಈ ಋತುವಿನಲ್ಲಿ ಐಪಿಎಲ್ ಆಡದೇ ಇರುವ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಕಾರಣ ಹೊರಹಾಕಿದ್ದಾರೆ.

ಇದಕ್ಕೆ ಮೊದಲು ಒಟ್ಟು ಮೂರು ‍ಫ್ರಾಂಚೈಸಿ ಪರ ಕ್ರಿಸ್ ಗೇಲ್ ಐಪಿಎಲ್ ಆಡಿದ್ದರು. ಇದರಲ್ಲಿ ಆರ್ ಸಿಬಿ ಪರ ಆಡುವಾಗ ಅವರಿಗೆ ಹೆಚ್ಚು ಫ್ಯಾನ್ಸ್ ಬೆಂಬಲವಿತ್ತು.

ಆದರೆ ಈ ಮೂರೂ ಫ್ರಾಂಚೈಸಿಗಳಲ್ಲಿ ಆಡಿದರೂ ನನಗೆ ಸೂಕ್ತ ಗೌರವ ಸಿಗಲಿಲ್ಲ ಎನಿಸಿತು. ಅದಕ್ಕಾಗಿ ಈ ವರ್ಷ ಐಪಿಎಲ್ ಹರಾಜಿನಿಂದ ಹೊರಗುಳಿಯಲು ನಿರ್ಧರಿಸಿದೆ. ಕ್ರಿಕೆಟ್ ಹೊರತಾಗಿಯೂ ಜೀವನವಿದೆ. ಹೀಗಾಗಿ ಸಹಜ ಜೀವನಕ್ಕೆ ಮರಳಲು ಪ್ರಯತ್ನಿಸುತ್ತಿದ್ದೇನೆ ಎಂದು ಗೇಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ