ಮುಂಬೈ: ಐಪಿಎಲ್ 2022 ರಲ್ಲಿ ಐದು ತಂಡಗಳು ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿವೆ. ಈ ತಂಡಗಳು ಯಾವುವು ಮತ್ತು ಅವುಗಳ ನಾಯಕರು ಯಾರು ನೋಡೋಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿಯಿಂದ ತೆರವಾದ ನಾಯಕತ್ವ ಸ್ಥಾನಕ್ಕೆ ಆರ್ ಸಿಬಿ ತಂಡ ದ.ಆಫ್ರಿಕಾ ಮೂಲದ ಫಾ ಡು ಪ್ಲೆಸಿಸ್ ರನ್ನು ಆಯ್ಕೆ ಮಾಡಿದೆ. ಪ್ಲೆಸಿಸ್ ಈ ಹಿಂದೆ ಐಪಿಎಲ್ ನಲ್ಲಿ ಚೆನ್ನೈ ತಂಡದ ಪರ ಆಡಿದ್ದರು.
ಲಕ್ನೋ ಸೂಪರ್ ಜೈಂಟ್ಸ್: ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ತಂಡ ತಮ್ಮ ನಾಯಕನನ್ನಾಗಿ ಟೀಂ ಇಂಡಿಯಾದ ಪ್ರತಿಭಾವಂತ ಕ್ರಿಕೆಟಿಗ, ಕಿಂಗ್ಸ್ ಪಂಜಾಬ್ ತಂಡದ ಮಾಜಿ ನಾಯಕ ಕೆಎಲ್ ರಾಹುಲ್ ರನ್ನು ಆಯ್ಕೆ ಮಾಡಿದೆ.
ಕೋಲ್ಕೊತ್ತಾ ನೈಟ್ ರೈಡರ್ಸ್: ಕಳೆದ ಬಾರಿ ಇಯಾನ್ ಮಾರ್ಗನ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಕೋಲ್ಕೊತ್ತಾ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ನಿಂದ ತಂಡದಲ್ಲಿದ್ದ ಶ್ರೇಯಸ್ ಅಯ್ಯರ್ ಗೆ ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ್ದಲ್ಲದೆ ನಾಯಕನಾಗಿ ನೇಮಿಸಿದೆ.
ಗುಜರಾತ್ ಟೈಟಾನ್ಸ್: ಮುಂಬೈ ಇಂಡಿಯನ್ಸ್ ತಂಡದ ಪರ ಆಡಿ ಅನುಭವಿಯಾಗಿರುವ ಹಾರ್ದಿಕ್ ಪಾಂಡ್ಯ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
ಪಂಜಾಬ್ ಕಿಂಗ್ಸ್: ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಕಿಂಗ್ಸ್ ಪಂಜಾಬ್ ನಾಯಕರಾಗಿ ಈ ಬಾರಿ ಇದೇ ತಂಡದಲ್ಲಿ ಉಳಿದುಕೊಂಡ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.