ಐಪಿಎಲ್ ಆರಂಭಿಕ ಪಂದ್ಯಕ್ಕೆ ಸೂರ್ಯಕುಮಾರ್ ಗೈರು

ಬುಧವಾರ, 16 ಮಾರ್ಚ್ 2022 (10:28 IST)
ಮುಂಬೈ: ಐಪಿಎಲ್ 2022 ಆರಂಭಕ್ಕೆ ಇನ್ನೇನು ವಾರ ಬಾಕಿಯಿದ್ದು, ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ರೂಪದಲ್ಲಿ ಶಾಕ್ ಎದುರಾಗಿದೆ.

ಮುಂಬೈ ತಂಡದ ಪ್ರಮುಖ ಆಟಗಾರ ಸೂರ್ಯಕುಮಾರ್ ಯಾದವ್ ಆರಂಭಿಕ ಪಂದ್ಯಕ್ಕೆ ಲಭ‍್ಯರಾಗುವುದು ಅನುಮಾನವಾಗಿದೆ. ಹೆಬ್ಬರಳಿನ ಗಾಯಕ್ಕೊಳಗಾಗಿದ್ದ ಸೂರ್ಯಕುಮಾರ್ ಚೇತರಿಕೆಗೆ ಇನ್ನೂ ಕೆಲವು ಸಮಯ ಹಿಡಿಯಬಹುದು.

ಹೀಗಾಗಿ ಮಾರ್ಚ್ 26 ರಿಂದ ಆರಂಭವಾಗುವ ಐಪಿಎಲ್ 2022 ರ ಆರಂಭಿಕ ಪಂದ್ಯಕ್ಕೆ ಸೂರ್ಯಕುಮಾರ್ ಲಭ್ಯರಾಗುವುದು ಅನುಮಾನ. ಸದ್ಯಕ್ಕೆ ಅವರು ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ