ಐಪಿಎಲ್ 2022: ಕೆಕೆಆರ್ ವಿರುದ್ಧ ಸೆಣಸಲಿರುವ ಹೈದರಾಬಾದ್
ಕೆಕೆಆರ್ ಕಳೆದ ಪಂದ್ಯ ಗೆದ್ದರೂ ಪ್ಲೇ ಆಫ್ ಕನಸು ಕ್ಷೀಣವಾಗಿದೆ. ಅಂಕಪಟ್ಟಿಯಲ್ಲಿ 12 ಪಂದ್ಯಗಳಿಂದ 5 ಗೆಲುವು ಸಂಪಾದಿಸಿ ಏಳನೇ ಸ್ಥಾನದಲ್ಲಿದೆ. ಹೀಗಾಗಿ ಇಂದು ಗೆದ್ದರೂ ಹೆಚ್ಚು ವ್ಯತ್ಯಾಸವಾಗದು.
ಅತ್ತ ಸನ್ ರೈಸರ್ಸ್ ಹೈದರಾಬಾದ್ ನದ್ದೂ ಇದೇ ಕತೆ.11 ಪಂದ್ಯಗಳಿಂದ 5 ಗೆಲುವು ಕಂಡಿರುವ ಹೈದರಾಬಾದ್ ಗೆ ಈಗ 6 ನೇ ಸ್ಥಾನದಲ್ಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಸೋತಿರುವ ಹೈದರಾಬಾದ್ ಗೆ ಈಗ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.