ಐಪಿಎಲ್ 2022: ಬ್ಯಾಟಿಗರಿಂದ ಸೋತ ಆರ್ ಸಿಬಿ

ಶನಿವಾರ, 14 ಮೇ 2022 (08:30 IST)
ಮುಂಬೈ: ದೊಡ್ಡ ಮೊತ್ತ ಬೆನ್ನತ್ತುವಾಗ ಉತ್ತಮ ಜೊತೆಯಾಟಗಳು ಬೇಕು. ಆದರೆ ಆರ್ ಸಿಬಿ ನಿನ್ನೆ ಕಿಂಗ್ಸ್ ಪಂಜಾಬ್ ವಿರುದ್ಧ ಬ್ಯಾಟಿಗರ ದೊಡ್ಡ ಇನಿಂಗ್ಸ್ ಇಲ್ಲದೇ ಸೋಲೇ ಗತಿಯಾಯಿತು.

ನಿನ್ನೆಯ ಪಂದ್ಯದಲ್ಲಿ ಪಂಜಾಬ್ 54 ರನ್ ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಜಾನಿ ಬೇರ್ ಸ್ಟೋ ಸಿಡಿಲಬ್ಬರದ 66 ರನ್, ಲಿವಿಂಗ್ ಸ್ಟೋನ್ 70 ರನ್ ಸಿಡಿಸಿದರು. ಆರ್ ಸಿಬಿ ಪರ ಹರ್ಷಲ್ ಪಟೇಲ್ 4 ವಿಕೆಟ್ ಕಬಳಿಸಿ ಮಿಂಚಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.  ವಿರಾಟ್ ಕೊಹ್ಲಿ 20, ರಜತ್ ಪಟಿದಾರ್ 26, ಗ್ಲೆನ್ ಮ್ಯಾಕ್ಸ್ ವೆಲ್ 35, ರನ್ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ