ಡಿಸೆಂಬರ್ 19 ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ

ಬುಧವಾರ, 6 ನವೆಂಬರ್ 2019 (10:15 IST)
ಮುಂಬೈ: ಐಪಿಎಲ್ ನ ಈ ವರ್ಷದ ಆವೃತ್ತಿಗೆ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಕೋಲ್ಕೊತ್ತಾದಲ್ಲಿ ನಡೆಸಲು ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.


ಈ ಮೊದಲು ಪ್ರತೀ ವರ್ಷವೂ ಐಪಿಎಲ್ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿಯೇ ನಡೆಯುತ್ತಿತ್ತು. ಆದರೆ ಈ ಬಾರಿ ಕೋಲ್ಕೊತ್ತಾದಲ್ಲಿ ನಡೆಯಲಿದೆ.

ಮುಂಬರುವ ಐಪಿಎಲ್ ಹರಾಜು ಪ್ರಕ್ರಿಯೆಗೆ ಪ್ರತೀ ಫ್ರಾಂಚೈಸಿಗೂ 85 ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಮೊತ್ತದೊಳಗೇ ಎಲ್ಲಾ ಫ್ರಾಂಚೈಸಿಗಳೂ ಆಟಗಾರರ ಖರೀದಿ ಪ್ರಕ್ರಿಯೆ ನಡೆಸಬೇಕು. ಅಲ್ಲದೆ, ಹೆಚ್ಚುವರಿ ಮೂರು ಕೋಟಿ ರೂ. ಮತ್ತು ಕಳೆದ ವರ್ಷ  ಬಾಕಿ ಉಳಿದ ಹಣವನ್ನು ಸೇರಿಸಿ ಫ್ರಾಂಚೈಸಿಗಳು ಖರೀದಿ ಪ್ರಕ್ರಿಯೆ ನಡೆಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ