ವಿರಾಟ್ ಕೊಹ್ಲಿಗೆ ಬರ್ತ್ ಡೇ ವಿಶ್ ಮಾಡಿ ಟ್ರೋಲ್ ಗೊಳಗಾದ ರವಿಶಾಸ್ತ್ರಿ

ಬುಧವಾರ, 6 ನವೆಂಬರ್ 2019 (09:05 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಏನೇ ಟ್ವೀಟ್ ಮಾಡಲಿ ಟ್ವಿಟರಿಗರು ಮಾತ್ರ ಅವರನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡುವುದನ್ನು ಬಿಡುವುದಿಲ್ಲ. ಇದೀಗ ನಾಯಕ ವಿರಾಟ್ ಕೊಹ್ಲಿಗೆ ಜನ್ಮದಿನ ಶುಭಾಷಯ ಕೋರಿದ್ದಕ್ಕೂ ಶಾಸ್ತ್ರಿ ಟ್ರೋಲ್ ಗೊಳಗಾಗಿದ್ದಾರೆ.


ನಿನ್ನೆ 31 ನೇ ಜನ್ಮದಿನ ಆಚರಿಸಿಕೊಂಡ ಕೊಹ್ಲಿಗೆ ರವಿಶಾಸ್ತ್ರಿ ತಮ್ಮ ಟ್ವಿಟರ್ ಪೇಜ್ ನಲ್ಲಿ ‘ಯಂಗ್ ಮ್ಯಾನ್ ಹ್ಯಾಪಿ ಬರ್ತ್ ಡೇ. ತಲೆಭಾರ ಎಲ್ಲಾ ಪಕ್ಕಕ್ಕಿಟ್ಟು, ಎಂಜಾಯ್ ಮಾಡು’ ಎಂದು ಬರೆದಿದ್ದರು.

ಇದನ್ನು ನೋಡಿದ ಟ್ವಿಟರಿಗರು ಅದಕ್ಕೆ ಸಾಕಷ್ಟು ಮೆಮೆಗಳ ಮೂಲಕ ಕಾಲೆಳೆದಿದ್ದಾರೆ. ಕೆಲವರು ‘ನನ್ನ ಪೇ ಚೆಕ್ ನ್ನು ಸುರಕ್ಷಿತವಾಗಿಟ್ಟುಕೋ’ ಎಂದರೆ ಇನ್ನು ಕೆಲವರು ರವಿಶಾಸ್ತ್ರಿಗೆ ಪಾರ್ಟಿಗೆ ಟಿಕೆಟ್ ದೊರಕಿಲ್ಲ. ಅದಕ್ಕೇ ಹೀಗಿದ್ದಾರೆ ಎಂದು ಟ್ರೈನ್ ನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಂತೆ ತಮಾಷೆಯ ಫೋಟೋ ಎಡಿಟ್ ಮಾಡಿ ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ