ಈ ವರ್ಷವೂ ಐಪಿಎಲ್ ಓಪನಿಂಗ್ ಕಾರ್ಯಕ್ರಮ ಮಾಡಲ್ಲ ಎಂದ ಬಿಸಿಸಿಐ

ಬುಧವಾರ, 6 ನವೆಂಬರ್ 2019 (09:54 IST)
ಮುಂಬೈ: ಕಳೆದ ವರ್ಷ ಐಪಿಎಲ್ ಆರಂಭಿಕ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದ ಬಿಸಿಸಿಐ ಅದಕ್ಕೆ ತಗುಲುವ ವೆಚ್ಚವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ದೇಣಿಗೆ ನೀಡಿತ್ತು.


ಈ ವರ್ಷವೂ ಐಪಿಎಲ್ ಆರಂಭಿಕ ಕಾರ್ಯಕ್ರಮಕ್ಕೆ ಕತ್ತರಿ ಹಾಕಲು ಬಿಸಿಸಿಐ ನಿರ್ಧರಿಸಿದೆ. ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಸುಮಾರು 30 ಕೋಟಿ ರೂ. ಖರ್ಚಾಗುತ್ತದೆ. ಇದು ವೃಥಾ ದುಡ್ಡು ದಂಡ. ಹೀಗಾಗಿ ಆ ವೆಚ್ಚವನ್ನು ಕಡಿತಗೊಳಿಸಲು ವರ್ಣರಂಜಿತ ಕಾರ್ಯಕ್ರಮವನ್ನೇ ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿದೆ.

ಸೋಮವಾರ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಭಿಮಾನಿಗಳೂ ಈ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿಲ್ಲ. ಹೀಗಾಗಿ ವೃಥಾ ಖರ್ಚು ಮಾಡುವುದು ಬೇಡ ಎಂದು ನಿರ್ಧರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ