ಐಪಿಎಲ್ ನಿಂದ ಟೀಂ ಇಂಡಿಯಾಗೆ ಬಡ್ತಿ ಪಡೆದ ಆಟಗಾರರು

ಮಂಗಳವಾರ, 24 ಮೇ 2022 (08:40 IST)
ಮುಂಬೈ: ಐಪಿಎಲ್ 2022 ರಲ್ಲಿ ಉತ್ತಮ ಪ್ರದರ್ಶನ ನೀಡಿದ ಅನೇಕ ಆಟಗಾರರಿಗೆ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅವಕಾಶ ಸಿಕ್ಕಿದೆ.

ಈ ಮೊದಲು ಐಪಿಎಲ್ ಒಂದೇ ಟೀಂ ಇಂಡಿಯಾ ಸೇರಿಕೊಳ್ಳಲು ಮಾನದಂಡವಲ್ಲ ಎನ್ನಲಾಗುತ್ತಿತ್ತು. ಆದರೆ ಈಗ ಐಪಿಎಲ್ ಪ್ರದರ್ಶನ ಆಧರಿಸಿ ಕಿರು ಮಾದರಿ ಕ್ರಿಕೆಟ್  ಗೆಆಟಗಾರನ್ನು ಆಯ್ಕೆ ಮಾಡಲಾಗಿದೆ.

ಈ ಪೈಕಿ ಉಮ್ರಾನ್ ಮಲಿಕ್ ಗೆ ಇದು ಮೊದಲ ಕರೆ. ಉಳಿದಂತೆ ಋತುರಾಜ್ ಗಾಯಕ್ ವಾಡ್, ಅರ್ಷ್ ದೀಪ್ ಸಿಂಗ್,  ರವಿ ಬಿಷ್ಣೋಯ್, ಆವೇಶ್ ಖಾನ್, ಹರ್ಷಲ್ ಪಟೇಲ್, ದೀಪಕ್ ಹೂಡಾ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವುದಕ್ಕೆ ಐಪಿಎಲ್ ಪ್ರದರ್ಶನವೇ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ