ಐಪಿಎಲ್ 2022: ಕಿಂಗ್ಸ್ ಪಂಜಾಬ್ ಮಣಿಸಿದ ಕೆಕೆಆರ್

ಶನಿವಾರ, 2 ಏಪ್ರಿಲ್ 2022 (08:40 IST)
ಮುಂಬೈ: ಐಪಿಎಲ್ 2022 ರಲ್ಲಿ ಕಿಂಗ್ಸ್ ಪಂಜಾಬ್ ವಿರುದ್ಧ ಕೋಲ್ಕೊತ್ತಾ ನೈಟ್ ರೈಡರ್ಸ್ 6 ವಿಕೆಟ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಪಂಜಾಬ್ 18.2 ಓವರ್ ಗಳಲ್ಲಿ 137 ರನ್ ಗಳಿಗೆ ಆಲೌಟ್ ಆಯಿತು.ರಾಜಪಕ್ಸೆ 31, ಕಗಿಸೊ ರಬಾಡ  25 ರನ್ ಗಳಿಸಿದದರು. ಕೆಕೆಆರ್ ಪರ ಉಮೇಶ್ ಯಾದವ್ 4, ಟಿಮ್ ಸೌಥಿ 2 ವಿಕೆಟ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ 14.3 ಓವರ್ ಗಳಲ್ಲಿ  4 ವಿಕೆಟ್ ನಷ್ಟಕ್ಕೆ 141 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು. ನಾಯಕ ಶ್ರೇಯಸ್ ಅಯ್ಯರ್ 26, ಸ್ಯಾಮ್ ಬಿಲ್ಲಿಂಗ್ಸ್ 24 ರನ್ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ