ಐಪಿಎಲ್ 2022: ಗೆಲುವಿನ ಹಳಿಗೆ ಮರಳಿದ ಕೋಲ್ಕೊತ್ತಾ
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ಸಂಜು ಸ್ಯಾಮ್ಸನ್ 54, ಶಿಮ್ರಾನ್ ಹೆಟ್ಮೈರ್ 27 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ 19.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಗೆಲುವು ಕಂಡಿತು. ಶ್ರೇಯಸ್ ಅಯ್ಯರ್ 34, ನಿತೀಶ್ ರಾಣಾ ಔಟಾಗದೇ 48 ಮತ್ತು ರಿಂಕು ಸಿಂಗ್ ಅಜೇಯ 42 ರನ್ ಗಳಿಸಿದರು.