ಐಪಿಎಲ್ ವೇಳೆಯೂ ಸುಮ್ಮನೇ ಕುಳಿತಿಲ್ಲ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್!
ಐಪಿಎಲ್ ನ ಈ ಬ್ರೇಕ್ ವೇಳೆಯೂ ದ್ರಾವಿಡ್ ರಾಷ್ಟ್ರೀಯ ತಂಡಕ್ಕಾಗಿ ಯುವ ಆಟಗಾರರನ್ನು ತಯಾರು ಮಾಡುವ ಕೆಲಸ ಮಾಡುತ್ತಿದ್ದಾರೆ.
ಎನ್ ಸಿಎನಲ್ಲಿ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಜೊತೆ ಕೂತು ದ್ರಾವಿಡ್ ಈಶಾನ್ಯ ವಲಯದ ಆಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ದ್ರಾವಿಡ್ ಯುವ ಆಟಗಾರರ ಅಭ್ಯಾಸ ವೀಕ್ಷಿಸುವುದು ಅವರಿಗೆ ಸಲಹೆ ಕೊಡುವುದರಲ್ಲಿ ಬ್ಯುಸಿಯಾಗಿದ್ದಾರೆ.