ಕೆಕೆಆರ್ ಹೊಸ ಸೆನ್ಸೇಷನ್ ವೆಂಕಟೇಶ್ ಐಯರ್ ಎಂಬಿಎ ಪದವೀಧರ!

ಶುಕ್ರವಾರ, 24 ಸೆಪ್ಟಂಬರ್ 2021 (10:05 IST)
ದುಬೈ: ಐಪಿಎಲ್ 14 ರಲ್ಲಿ ಕೆಕೆಆರ್ ಪರ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ವೆಂಕಟೇಶ್ ಐಯರ್ ಬಗ್ಗೆ ಹಲವು ಕುತೂಹಲಕಾರಿ ಅಂಶಗಳು ಹೊರಬಿದ್ದಿವೆ.


ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ 53 ರನ್ ಗಳಿಸಿ ಗೆಲುವಿನ ರೂವಾರಿಯಾಗಿದ್ದ 26 ವರ್ಷದ ವೆಂಕಟೇಶ್ ಎಂಬಿಎ ಪದವೀಧರ. ಕ್ರಿಕೆಟ್ ಮೇಲಿನ ಹುಚ್ಚಿನಿಂದ ದೊಡ್ಡ ಹುದ್ದೆಯನ್ನೇ ತ್ಯಜಿಸಿದವರು.

ಇನ್ನು, ವೆಂಕಟೇಶ್ ಐಯರ್ ಗೆ ಸೂಪರ್ ಸ್ಟಾರ್ ರಜನೀಕಾಂತ್ ಎಂದರೆ ಅಚ್ಚುಮೆಚ್ಚು. ಸದ್ಯ ಇಂಧೋರ್ ನಲ್ಲಿ ನೆಲೆಸಿರುವ ವೆಂಕಟೇಶ್ ರಜನೀಕಾಂತ್ ಸಿನಿಮಾ ಬಂದರೆ ಚೆನ್ನೈಗೇ ಬಂದು ಥಿಯೇಟರ್ ನಲ್ಲಿ ಸಿನಿಮಾ ನೋಡಿ ಖುಷಿಪಡುತ್ತಾರಂತೆ. ರಜನಿಕಾಂತ್ ಅವರ ಸ್ಪೂರ್ತಿ. ಇನ್ನು, ಬೆಂಗಳೂರಿನಲ್ಲಿ ಅವರಿಗೆ ಪದವಿಗೆ ತಕ್ಕ ಉತ್ತಮ ಉದ್ಯೋಗವೇ ಸಿಕ್ಕಿತ್ತು. ಆದರೆ ಕ್ರಿಕೆಟ್ ಆಡಲು ಆಗಲ್ಲ ಎಂಬ ಕಾರಣಕ್ಕೆ ನೌಕರಿಯನ್ನೇ ತ್ಯಜಿಸಿದ್ದರಂತೆ. ಮಹಾರಾಷ್ಟ್ರ ಪರ ಆಲ್ ರೌಂಡರ್ ಆಗಿ ಕ್ರಿಕೆಟ್ ಆಡುವ ವೆಂಕಟೇಶ್ ಈಗ ಕೆಕೆಆರ್ ಪರ ಮಿಂಚುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ