ಐಪಿಎಲ್ 14: ಮುಂಬೈಗೆ ಶಾಕ್ ಕೊಟ್ಟ ಕೆಕೆಆರ್

ಶುಕ್ರವಾರ, 24 ಸೆಪ್ಟಂಬರ್ 2021 (08:45 IST)
ದುಬೈ: ಐಪಿಎಲ್ 14 ರಲ್ಲಿ ಪ್ರಬಲ ಮುಂಬೈಗೆ ಕೋಲ್ಕೊತ್ತಾ ನೈಟ್ ರೈಡರ್ಸ್ ಶಾಕ್ ಕೊಟ್ಟಿದೆ. ರೋಹಿತ್ ಪಡೆಗೆ 7 ವಿಕೆಟ್ ಸೋಲುಣಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ರೋಹಿತ್ ಶರ್ಮಾ 33, ಕ್ವಿಂಟನ್ ಡಿ ಕಾಕ್ 55,  ರನ್ ಗಳಿಸಿದರು.

ಬಳಿಕ ಬ್ಯಾಟಿಂಗ್ ಮಾಡಿದ ಕೆಕೆಆರ್ ಪರ ರಾಹುಲ್ ತ್ರಿಪಾಟಿ ಅಜೇಯ 74 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.ಆರಂಭಿಕ ವೆಂಕಟೇಶ್ ಐಯರ್ 53 ರನ್ ಗಳಿಸಿದರು. ಅಂತಿಮವಾಗಿ ಕೆಕೆಆರ್ 15.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ