ಮುಂಬೈನಲ್ಲಿಯೇ ನಡೆಯಲಿದೆ ಐಪಿಎಲ್ 14: ಮಹಾರಾಷ್ಟ್ರ ಸಚಿವ

ಮಂಗಳವಾರ, 6 ಏಪ್ರಿಲ್ 2021 (07:02 IST)
ಮುಂಬೈ: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂಬೈನಿಂದ ಐಪಿಎಲ್ 14 ಪಂದ್ಯಗಳು ಶಿಫ್ಟ್ ಆಗುವ ಕುರಿತು ವದಂತಿಗಳಿಗೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಸ್ಪಷ್ಟನೆ ನೀಡಿದ್ದಾರೆ.


‘ಎಲ್ಲಾ ರೀತಿಯ ಸುರಕ್ಷಾ ಕ್ರಮಗಳೊಂದಿಗೆ ಮುಂಬೈನಲ್ಲಿ ನಿಗದಿಯಂತೇ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂದು ನವಾಬ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.

‘ಮೈದಾನಕ್ಕೆ ವೀಕ್ಷಕರಿಗೆ ಪ್ರವೇಶವಿರಲ್ಲ. ಕೇವಲ ಕ್ರಿಕೆಟಿಗರು ಮತ್ತು ಸಿಬ್ಬಂದಿಗಳಿಗೆ ಮಾತ್ರ ಪ್ರವೇಶವಿರುತ್ತದೆ. ಅವರೂ ಪಂದ್ಯಕ್ಕೆ ಮೊದಲು ಐಸೋಲೇಟ್ ಆಗಿರಬೇಕು’ ಎಂದು ಅವರು ಹೇಳಿದ್ದಾರೆ. ಕೊವಿಡ್ ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ ಹೊಸ ನೀತಿ ನಿಯಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ