ದುಬೈ ವಿಮಾನವೇರಿದ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಕಾದಿತ್ತು ಅಚ್ಚರಿ

ಸೋಮವಾರ, 16 ಆಗಸ್ಟ್ 2021 (09:15 IST)
ಮುಂಬೈ: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14 ರ ಉಳಿದ ಪಂದ್ಯಗಳನ್ನಾಡಲು ಮುಂಬೈ ಇಂಡಿಯನ್ಸ್ ತಂಡ ವಿಶೇಷ ವಿಮಾನದ ಮೂಲಕ ಅಬುದಾಬಿಗೆ ಪ್ರಯಾಣ ಬೆಳೆಸಿದೆ.


ಆದರೆ ವಿಶೇಷ ವಿಮಾನವೇರಿದ ಆಟಗಾರರಿಗೆ ಪೈಲಟ್ ನೀಡಿದ ಸ್ವಾಗತ ಎಲ್ಲರಿಗೂ ಸರ್ಪೈಸ್ ಆಗಿತ್ತು. ಮಳೆಯ ಕಾರಣಕ್ಕೆ ವಿಮಾನ ಕೊಂಚ ಮೊದಲೇ ಹಾರಲು ರೆಡಿಯಾಗಿತ್ತು.

ಈ ವೇಳೆ ಪೈಲಟ್ ಆಟಗಾರರನ್ನು ಸ್ವಾಗತಿಸಿ ಬಳಿಕ ‘ಮಳೆಯ ಕಾರಣದಿಂದ ನಾವು ಬೇಗನೇ ಹೊರಡಬೇಕಿದೆ. ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್ ತಮ್ಮ ತಂಡಕ್ಕೆ ತ್ವರಿತ ಆರಂಭ ನೀಡುವಂತೆ ನಾವೂ ಬೇಗನೇ ಹೊರಡಬೇಕಿದೆ’ ಎಂದು ಪೈಲಟ್ ಹೇಳಿದ್ದು ಅಲ್ಲಿದ್ದ ಆಟಗಾರರ ಮೊಗದಲ್ಲಿ ನಗು ತರಿಸಿದೆ. ಈ ವಿಶೇಷ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ