ಗೆಲುವಿಗೆ ಬೇಕಾದ ರನ್ ರೇಟ್ ಏರುತ್ತಲೇ ಹೋಗಿ ಧವನ್ ಅರ್ಧಶತಕ ಪೂರೈಸಿದ ಬಳಿಕ ಯಾದವ್ ಎಸೆತಕ್ಕೆ ಕಾಲಿನ್ ಮನ್ರೋಗೆ ಸುಲಭದ ಕ್ಯಾಚ್ ನೀಡಿ ಔಟಾದರು. ನಾಲ್ಕು ಎಸೆತಗಳ ನಂತರ ನಮನ್ ಓಜಾ ಕೂಡ ನಾರಾಯಣ್ ಎಸೆತಕ್ಕೆ ಔಟಾದರು. ಯುವರಾಜ್ ಸಿಂಗ್ ಯಾದವ್ ಎಸೆತದಲ್ಲಿ ಎರಡು ಸಿಕ್ಸರ್ ಬಾರಿಸಿದರು. ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ ಯುವರಾಜ್ ಅವರನ್ನು ಔಟ್ ಮಾಡಿದ ಬಳಿಕ ದೀಪಕ್ ಹೂಡಾ ರನ್‌ಔಟ್‌ಗೆ ಬಲಿಯಾದರು.