ಸಿಎಸ್ ಕೆ ಬಿಟ್ಟು ಮುಂಬೈ ಸೇರಿಕೊಳ್ಳಲಿರುವ ರವೀಂದ್ರ ಜಡೇಜಾ?
ಈಗಾಗಲೇ ಜಡೇಜಾ ಚೆನ್ನೈ ತಂಡದ ಜೊತೆಗಿನ ಸೋಷಿಯಲ್ ಮೀಡಿಯಾ ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಇದೀಗ ಜಡೇಜಾ ಮುಂದಿನ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಇದಕ್ಕೆ ಕಾರಣ ಜಡೇಜಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಬ್ಲೂ ಜೆರ್ಸಿ ಧರಿಸಿ ಬ್ಲೂ ಅಡಿಕ್ಷನ್ ಎಂದು ಅಡಿಬರಹ ಬರೆದುಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು ಅವರು ಮುಂದಿನ ಬಾರಿ ಮುಂಬೈ ಫ್ರಾಂಚೈಸಿ ಸೇರಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ.