IPL 18ನೇ ಸೀಸನ್‌ನಲ್ಲಿ ಆರ್‌ಸಿಬಿ ಟ್ರೋಫಿ ಎತ್ತುವುದು ಪಕ್ಕಾ ಎಂದು ತಂಡದ ಮಾಜಿ ಸ್ಟಾರ್‌ ಆಟಗಾರ

Sampriya

ಬುಧವಾರ, 19 ಮಾರ್ಚ್ 2025 (17:15 IST)
Photo Courtesy X
ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿ ಸಮತೋಲನದಿಂದ ಕೂಡಿದ್ದು, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಯಲ್ಲಿ ಖಂಡಿತವಾಗಿಯೂ ಟ್ರೋಫಿ ಎತ್ತಲಿದೆ ಎಂದು ತಂಡದ ಮಾಜಿ ಸ್ಟಾರ್‌ ಆಟಗಾರ ಎಬಿಡಿ ವಿಲಿಯರ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಟ್ರೋಫಿ ಗೆಲ್ಲುವುದು ತುಂಬಾ ಕಷ್ಟ.  ವಿಶ್ವಕಪ್ ಗೆಲ್ಲಬಹುದಾದ 10 ವಿಶ್ವ ದರ್ಜೆಯ ತಂಡಗಳಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ  ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡಿವಿಲಿಯರ್ಸ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಹೇಳಿದರು.

ಆರ್‌ಸಿಬಿಯ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ 18ನೇ ಸಂಖ್ಯೆಯ ಜೆರ್ಸಿಯನ್ನು ಧರಿಸಿ ಮುನ್ನಡೆಸುತ್ತಿದ್ದಾರೆ. ಈ ಬಾರಿ ಐಪಿಎಲ್‌ನ 18ನೇ ಸೀಸನ್‌ನಲ್ಲಿ ನಡೆಯುತ್ತಿದೆ. ಹೀಗಾಗಿ ಒಂದಕ್ಕೊಂದು ಸಂಬಂಧವಿದೆ ಎಂದು ಅವರು ಹೇಳಿದ್ದಾರೆ.

ಆರ್‌ಸಿಬಿ ಟ್ರೋಫಿ ಎತ್ತಿ ಹಿಡಿದರೆ, ವಿರಾಟ್ ಜೊತೆ ಆಚರಿಸಲು ನಾನು ಅಲ್ಲಿಗೆ ಬರುತ್ತೇನೆ!. ವಿರಾಟ್‌ ಅವರು ಕ್ರಿಕೆಟ್ ಮೈದಾನದ ಎಲ್ಲಾ ಪ್ರದೇಶಗಳಿಗೂ ಚೆಂಡನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಸಿಬಿ ತಂಡವು ಮಾರ್ಚ್ 22 ರಂದು ನಡೆಯಲಿರುವ ಋತುವಿನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಬಾರಿ ಆರ್‌ಸಿಬಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸಲಿದ್ದಾರೆ., ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್  ತಂಡದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ