ಐಪಿಎಲ್ 14: ಬ್ಲೂ ಜೆರ್ಸಿ ತೊಟ್ಟು ಆಡಲಿದೆ ಆರ್ ಸಿಬಿ

ಬುಧವಾರ, 15 ಸೆಪ್ಟಂಬರ್ 2021 (09:00 IST)
ದುಬೈ: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14 ರ ಎರಡನೇ ಭಾಗದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಂದು ಪಂದ್ಯದಲ್ಲಿ ನೀಲಿ ಸಮವಸ್ತ್ರ ಧರಿಸಿ ಆಡಲಿದೆ.


ಸೆಪ್ಟೆಂಬರ್ 20 ರಂದು ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆರ್ ಸಿಬಿ ಆಟಗಾರರು ನೀಲಿ ಸಮವಸ್ತ್ರ ಧರಿಸಲಿದ್ದಾರೆ. ಕೊವಿಡ್ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ಆರ್ ಸಿಬಿ ಈ ನಿರ್ಧಾರ ಮಾಡಿದೆ.

ಸಾಮಾನ್ಯವಾಗಿ ಪ್ರತೀ ವರ್ಷ ಆರ್ ಸಿಬಿ ಒಂದು ಪಂದ್ಯದಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಹಸಿರು ಸಮವಸ್ತ್ರ ಧರಿಸಿ ಆಡುತ್ತದೆ. ಆದರೆ ಈ ವರ್ಷ ಕೊವಿಡ್ ಕಾರ್ಯಕರ್ತರಿಗೂ ಗೌರವ ಸಲ್ಲಿಸಲು ತೀರ್ಮಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ