ಸನ್‌ರೈಸರ್ಸ್ ಐಪಿಎಲ್ ಚಾಂಪಿಯನ್ನರಾಗಲು ಯೋಗ್ಯ ತಂಡ: ಗವಾಸ್ಕರ್

ಸೋಮವಾರ, 30 ಮೇ 2016 (15:37 IST)
ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಚಾಂಪಿಯನ್ನರಾಗಲು ಯೋಗ್ಯ ತಂಡವಾಗಿದೆ ಎಂದು ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ತಂಡವೊಂದು 5 ದಿನಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಮೇಲೆ ಅದು ಚಾಂಪಿಯನ್ನರಾಗಲು ಅರ್ಹ ತಂಡ ಎಂದು ಸುನಿಲ್ ಗವಾಸ್ಕರ್ ಹೇಳಿದರು.
 
 ಸನ್‌ರೈಸರ್ಸ್ ಕೊಲ್ಕತಾ ನೈಟ್ ರೈಡರ್ಸ್ ತಂಡವನ್ನು ಎಲಿಮಿನೇಟರ್‌ನಲ್ಲಿ ಸೋಲಿಸಿದ ಬಳಿಕ ಗುಜರಾತ್ ಲಯನ್ಸ್ ತಂಡದ ವಿರುದ್ಧ ಮೇಲುಗೈ ಪಡೆದು ಫೈನಲ್ ಪ್ರವೇಶಿಸಿತ್ತು. ಸನ್‌ರೈಸರ್ಸ್‌ಗೆ ಇದೊಂದು ತಂಡದ ಪ್ರಯತ್ನವಾಗಿತ್ತು.  ಎಸ್‌ಆರ್‌ಎಚ್ 200 ಪ್ಲಸ್ ರನ್ ಸ್ಕೋರ್ ಮಾಡಿರದೇ ಆರ್‌ಸಿಬಿ ಮೇಲೆ ಒತ್ತಡ ಹಾಕಿದ್ದರೆ ಅವರು ಪಂದ್ಯವನ್ನು ಗೆಲ್ಲುತ್ತಿರಲಿಲ್ಲ ಎಂದು ಗವಾಸ್ಕರ್ ಹೇಳಿದರು. ಕ್ರಿಸ್ ಗೇಲ್ ಕೂಡ ಆ ರೀತಿಯ ಇನ್ನಿಂಗ್ಸ್ ಆಡಿರದಿದ್ದರೆ ಆರ್‌ಸಿಬಿ ಕೂಡ ಅಷ್ಟು ದೂರ ಸಾಗುತ್ತಿರಲಿಲ್ಲ ಎಂದು ಹೇಳಿದರು.
 
 ಐಪಿಎಲ್‌ನಲ್ಲಿ ಎಡಗೈ ಆಟಗಾರರು ಚೆನ್ನಾಗಿ ಆಡುತ್ತಿರುವುದು ಸಂತಸದ ವಿಚಾರ ಎಂದು ಗವಾಸ್ಕರ್ ಉದ್ಗರಿಸಿದರು. ವಾರ್ನರ್ ಬ್ಯಾಟ್ ಮಾಡಿದ ರೀತಿ ಮತ್ತು ಮುಸ್ತಫಿಜುರ್ ರೆಹ್ಮಾನ್ ಬೌಲ್ ಮಾಡಿದ ರೀತಿಯಿಂದ ಎಡಗೈ ಆಟಗಾರರು ಚೆನ್ನಾಗಿ ಆಡುತ್ತಿರುವುದು ಸಂತಸದ ವಿಚಾರ ಎಂದು ಗವಾಸ್ಕರ್ ಹೇಳಿದರು.
 
ಚಾಂಪಿಯನ್ನರು 5 ದಿನಗಳಲ್ಲಿ 3 ಪಂದ್ಯಗಳನ್ನು ಗೆದ್ದಿದ್ದಾರೆ. ಪ್ರಯಾಣ ಒಳಗೊಂಡಿದ್ದರಿಂದ ಅದು ಅಷ್ಟು ಸುಲಭವಾಗಿರಲಿಲ್ಲ. ಆರ್‌ಸಿಬಿ ಫೇವರಿಟ್ ಎಂದು ನೀವು ಹೇಳಬಹುದು. ಆದರೆ ಹೈದರಾಬಾದ್ ಅದಕ್ಕೆ ಅರ್ಹವಾದ ಚಾಂಪಿಯನ್ನರು ಎಂದು ಗವಾಸ್ಕರ್ ಬಣ್ಣಿಸಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ