ಸನ್‌ರೈಸರ್ಸ್ ವಿರುದ್ಧ ಡೆಲ್ಲಿ ಡೇರ್ ಡೆವಿಲ್ಸ್ ಗೆಲುವು: ಚಿಗುರಿದ ಪ್ಲೇಆಫ್ ಕನಸು

ಶನಿವಾರ, 21 ಮೇ 2016 (11:21 IST)
ಕರುಣ್ ನಾಯರ್ ಅವರ ಅಮೋಘ 59 ಎಸೆತಗಳಲ್ಲಿ 83 ರನ್ ನೆರವಿನಿಂದಾಗಿ ಡೆಲ್ಲಿ ಡೇವಿಲ್ಸ್ ತಂಡದ ಪ್ಲೇ ಆಫ್ ಕನಸು ಮತ್ತೆ ಚಿಗುರಿದೆ. ಈ ಪಂದ್ಯದಲ್ಲಿ ಸೋತಿದ್ದರೆ ಡೆಲ್ಲಿ ಡೇರ್ ಡೆವಿಲ್ಸ್ ಪ್ಲೇ ಆಫ್ ಕನಸು ಕಮರಿ ಹೋಗುತ್ತಿತ್ತು. ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲಿಗೆ ಬ್ಯಾಟಿಂಗ್ ಆರಂಭಿಸಿ 7 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿತು.

ಬ್ರಾತ್‌ವೈಟ್ 2 ವಿಕೆಟ್ ಮತ್ತು ಕೋಲ್ಟರ್ ನೈಲ್, ಡುಮಿನಿ ತಲಾ ಒಂದು ವಿಕೆಟ್ ಕಬಳಿಸಿದರು. ಸನ್‌ರೈಸರ್ಸ್ ಪರ ಡೇವಿಡ್ ವಾರ್ನರ್ ಉತ್ತಮ ಅಡಿಪಾಯ ಹಾಕಿ ಕೊಟ್ಟು 73 ರನ್ ಗಳಿಸಿದರು. ಆದರೆ ಉಳಿದ ಆಟಗಾರರಿಂದ ಅಷ್ಟೊಂದು ಉತ್ತಮ ಆಟ ಮೂಡಿಬರಲಿಲ್ಲವಾದ್ದರಿಂದ ಕೇವಲ 158 ರನ್‌ ಗಳಿಸಲು ಮಾತ್ರ ಶಕ್ತವಾಯಿತು.

ಈ ಸ್ಕೋರನ್ನು ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ಪರ ಕ್ವಿಂಟನ್ ಡಿ ಕಾಕ್ ಆರಂಭದಲ್ಲೇ ಔಟಾದರು. ಆದರೆ ರಿಷಬ್ ಪಂತ್ ಮತ್ತು ಕರುಣ್ ನಾಯರ್ 73 ರನ್ ಜತೆಯಾಟವಾಡಿದರು. ಕರುಣ್ ನಾಯರ್ ಅವರು 59 ಎಸೆತಗಳಲ್ಲಿ 83ರನ್ ಸಿಡಿಸಿದ್ದು, ಅವರ ಸ್ಕೋರಿನಲ್ಲಿ 8 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ