ಐಪಿಎಲ್ ತಂಡ ಕೂಡಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗರು

ಮಂಗಳವಾರ, 30 ಮಾರ್ಚ್ 2021 (10:21 IST)
ಮುಂಬೈ: ಏಪ್ರಿಲ್ 9 ರಿಂದ ಆರಂಭವಾಗಲಿರುವ ಐಪಿಎಲ್ 14 ರ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಕ್ರಿಕೆಟಿಗರು ಆಯಾ ತಂಡಕ್ಕೆ ಸೇರಿಕೊಂಡಿದ್ದಾರೆ.

 

ಮೊನ್ನೆಯಷ್ಟೇ ಇಂಗ್ಲೆಂಡ್ ವಿರುದ್ಧ ಸರಣಿ ಮುಕ್ತಾಯಗೊಂಡಿದೆ. ಇದಾದ ಬೆನ್ನಲ್ಲೇ ಕ್ರಿಕೆಟಿಗರು ತಮ್ಮ ತಮ್ಮ ತಂಡದ ಜೈವ ಸುರಕ್ಷಾ ವಲಯದಲ್ಲಿ ಸೇರಿದ್ದಾರೆ.

ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಡೆಲ್ಲಿ ಕ್ಯಾಪಿಟಲ್ಸ್ ನ ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಚೆನ್ನೈ ತಂಡದ ಚೇತೇಶ್ವರ ಪೂಜಾರ, ದೀಪಕ್ ಚಹರ್ ಸೇರಿದಂತೆ ಬಹುತೇಕ ಕ್ರಿಕೆಟಿಗರು ಆಯಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಮತ್ತೊಂದು ಆವೃತ್ತಿಯ ಕ್ರಿಕೆಟ್ ಜಾತ್ರೆ ಆರಂಭಕ್ಕೆ ಕ್ಷಣಗಣನೆ ಶುರುವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ