ಇಂಗ್ಲೆಂಡ್ ಸರಣಿಯಿಂದ ಟೀಂ ಇಂಡಿಯಾ ಸಂಪಾದಿಸಿದ್ದು ಈ ಮೂವರನ್ನು

ಮಂಗಳವಾರ, 30 ಮಾರ್ಚ್ 2021 (08:55 IST)
ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಮುಕ್ತಾಯವಾಗಿದೆ. ಸರಣಿ ಗೆಲುವಿನ ಜೊತೆಗೆ ಟೀಂ ಇಂಡಿಯಾಕ್ಕೆ ಮತ್ತೆ ಪ್ರತಿಭಾವಂತರನ್ನು ಸಂಪಾದಿಸಲು ಸಾಧ‍್ಯವಾಗಿದೆ.


ಈ ಸರಣಿಯಲ್ಲಿ ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಅಕ್ಸರ್ ಪಟೇಲ್ ಎಂಬ ಪ್ರತಿಭೆಗಳನ್ನು ಕಂಡುಕೊಂಡಿದ್ದು. ಈ ಪೈಕಿ ಅಕ್ಸರ್ ಪಟೇಲ್ ಟೆಸ್ಟ್ ಸರಣಿಯಲ್ಲಿ ಮಿಂಚಿ, ಸರಣಿ ಗೆಲುವಿನ ರೂವಾರಿಯಾದರೆ, ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಟಿ20 ಸರಣಿಯಲ್ಲಿ ಮಿಂಚಿದ್ದಾರೆ.

ಪ್ರತೀ ಸರಣಿಯ ಬಳಿಕ ಭಾರತ ಮತ್ತೊಂದಷ್ಟು ಹೊಸ ಪ್ರತಿಭೆಗಳನ್ನು ಕಂಡುಕೊಳ್ಳುತ್ತಿದೆ. ಹೀಗಾಗಿ ಟೀಂ ಇಂಡಿಯಾದ ಬೆಂಚ್ ಸ್ಟ್ರೆಂಗ್ತ್ ಸದೃಢವಾಗಿದೆ. ಇದು ಭವಿಷ್ಯದ ದೃಷ್ಟಿಯಿಂದ ಭಾರತಕ್ಕೆ ಲಾಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ