ಐಪಿಎಲ್ ನ ಮೂರು ಮುರಿಯಲಾಗದ ದಾಖಲೆಗಳು

ಗುರುವಾರ, 16 ಸೆಪ್ಟಂಬರ್ 2021 (08:55 IST)
ದುಬೈ: ಐಪಿಎಲ್ ನಲ್ಲಿ ಹಲವು ಮುರಿಯಲಾಗದಂತಹ ದಾಖಲೆಗಳು ದಾಖಲಾಗಿವೆ. ಆ ಪೈಕಿ ಮೂರು ಪ್ರಮುಖ ದಾಖಲೆಗಳನ್ನು ನೋಡೋಣ.


ಕೊಹ್ಲಿಯ ಗರಿಷ್ಠ ರನ್
ಆರ್ ಸಿಬಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲದೇ ಇದ್ದಿರಬಹುದು. ಆದರೆ ಬ್ಯಾಟ್ಸ್ ಮನ್ ಆಗಿ ಕೊಹ್ಲಿ ದಾಖಲೆಯನ್ನು ಯಾರೂ ಮುರಿಯುವುದು ಸಾಧ್ಯವಿಲ್ಲ. ಒಂದೇ ಸೀಸನ್ ನಲ್ಲಿ ಕೊಹ್ಲಿ 973 ರನ್ ಸಿಡಿಸಿ ದಾಖಲೆ ಮಾಡಿದ್ದಾರೆ. 2016 ರ ಐಪಿಎಲ್ ನಲ್ಲಿ ಕೊಹ್ಲಿ ಈ ದಾಖಲೆ ಮಾಡಿದ್ದರು.

ಯುವರಾಜ್ ಸಿಂಗ್ ಹ್ಯಾಟ್ರಿಕ್
ಯುವರಾಜ್ ಸಿಂಗ್ ಸಿಕ್ಸರ್ ಕಿಂಗ್ ಎಂದು ಎನಿಸಿಕೊಂಡಿದ್ದಷ್ಟೇ ಅಲ್ಲ, ಬೌಲಿಂಗ್ ನಲ್ಲೂ ಕಮಾಲ್ ಮಾಡಿದ್ದಾರೆ. ಒಂದೇ ಐಪಿಎಲ್ ಸೀಸನ್ ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿದ ದಾಖಲೆ ಯುವಿಯದ್ದು. 2009 ರಲ್ಲಿ ಯುವಿ ಮಾಡಿದ ಈ ದಾಖಲೆಯನ್ನು ಯಾರೂ ಮುರಿದಿಲ್ಲ.

ಕ್ರಿಸ್ ಗೇಲ್ ಬಿರುಗಾಳಿ ಬ್ಯಾಟಿಂಗ್
ಹೊಡೆಬಡಿಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ 2013 ರಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಪ್ರತಿನಿಧಿಸಿ ಅಜೇಯ 175 ರನ್ ಚಚ್ಚಿದ್ದರು. ಈ ಪಂದ್ಯದಲ್ಲಿ ಎದುರಾಳಿ ಪುಣೆ ವಾರಿಯರ್ಸ್ ಗೇಲ್ ಬಿರುಗಾಳಿ ಎದುರು ಸಂಪೂರ್ಣ ನೆಲಕಚ್ಚಿತ್ತು. ಇದು ಟಿ20 ಕ್ರಿಕೆಟ್ ನಲ್ಲೇ ವೈಯಕ್ತಿಕ ಗರಿಷ್ಠ ರನ್ ಆಗಿ ಉಳಿದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ