ನೂತನ ಐಪಿಎಲ್ ತಂಡಕ್ಕೆ ಬಿಡ್ ದಿನಾಂಕ ಫಿಕ್ಸ್

ಬುಧವಾರ, 15 ಸೆಪ್ಟಂಬರ್ 2021 (10:10 IST)
ದುಬೈ: ಐಪಿಎಲ್ ನಲ್ಲಿ ಇನ್ನೂ ಎರಡು ತಂಡಗಳನ್ನು ಸೇರ್ಪಡೆಗೊಳಿಸಲು ಬಿಸಿಸಿಐ ನಿರ್ಧಾರ ಮಾಡಿದೆ. ಇದಕ್ಕೆ ಈಗಾಗಲೇ ಬಿಡ್ ಸಲ್ಲಿಸಲು ಆಹ್ವಾನ ನೀಡಿತ್ತು.


ಈಗ ಬಿಡ್ ಕರೆಯಲು ಅಕ್ಟೋಬರ್ 17 ರಂದು ದಿನಾಂಕ ನಿಗದಿ ಮಾಡಿದೆ. ಐಪಿಎಲ್ 14 ಮುಗಿದ ಬಳಿಕ ಹೊಸ ತಂಡಗಳಿಗೆ ಬಿಡ್ ಕರೆಯಲು ಬಿಸಿಸಿಐ ತೀರ್ಮಾನಿಸಿದೆ.

ಮುಂದಿನ ಐಪಿಎಲ್ ಗೆ ತಂಡಗಳ ಜೊತೆಗೆ ಪಂದ್ಯಗಳ ಸಂಖ್ಯೆಯೂ ಹೆಚ್ಚಲಿದೆ. ಶ್ರೀಮಂತ ಕ್ರಿಕೆಟ್ ಲೀಗ್ ನ ರೋಚಕತೆ ಹೆಚ್ಚಿಸಲು ಹೊಸ ತಂಡಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ