ಆರ್ ಸಿಬಿಯ ಇಬ್ಬರು ಆಟಗಾರರು ತವರಿಗೆ ವಾಪಸ್

ಸೋಮವಾರ, 26 ಏಪ್ರಿಲ್ 2021 (10:39 IST)
ಮುಂಬೈ: ಐಪಿಎಲ್ 14 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಆಸ್ಟ್ರೇಲಿಯಾ ಆಡಂ ಝಂಪಾ ಮತ್ತು ಕೇನ್ ರಿಚರ್ಡ್ ಸನ್ ವೈಯಕ್ತಿಕ ಕಾರಣ ನೀಡಿ ತವರಿಗೆ ವಾಪಸಾಗಿದ್ದಾರೆ.


ಇದರಿಂದಾಗಿ ಉಳಿದ ಐಪಿಎಲ್ ಪಂದ್ಯಗಳಿಗೆ ಈ ಇಬ್ಬರೂ ಆಟಗಾರರು ಅಲಭ್ಯರಾಗಲಿದ್ದಾರೆ. ಈ ಬಗ್ಗೆ ಆರ್ ಸಿಬಿ ಅಧಿಕೃತವಾಗಿ ಪ್ರಕಟಣೆ ತಿಳಿಸಿದೆ. ಅವರ ನಿರ್ಧಾರ ಗೌರವಿಸಿ ತಂಡದಿಂದ ರಿಲೀಸ್ ಮಾಡುತ್ತಿರುವುದಾಗಿ ಹೇಳಿದೆ.

ಇಬ್ಬರೂ ಆಟಗಾರರಿಂದ ಹೇಳಿಕೊಳ್ಳುವಂತಹ ಪ್ರದರ್ಶನವೇನೂ ಬಂದಿಲ್ಲ. ಹೀಗಾಗಿ ಇಬ್ಬರು ಆಟಗಾರರ ಅನುಪಸ್ಥಿತಿ ಅಂಥಾ ಪರಿಣಾಮವೇನೂ ಬೀರದು. ನಿನ್ನೆಯ ಪಂದ್ಯದಲ್ಲಿ ಆರ್ ಸಿಬಿ ಸಿಎಸ್ ಕೆ ವಿರುದ್ಧ ಸೋಲು ಅನುಭವಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ