ಮುಂಬೈ: ಕೊರೋನಾ ಭೀತಿ ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ, ಅಂಪಾಯರ್ ಗಳಲ್ಲೂ ಇದೆ. ಭಾರತೀಯ ಮೂಲದ ಅಂಪಾಯರ್ ನಿತಿನ್ ಮೆನನ್ ಐಪಿಎಲ್ ನಿಂದ ಹೊರಬಂದಿದ್ದಾರೆ.
ಐಪಿಎಲ್ 14 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತಿನ್ ತಮ್ಮ ಕುಟುಂಬಸ್ಥರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಕೂಟದಿಂದ ಹೊರನಡೆದಿದ್ದಾರೆ. ಅವರೀಗ ತಮ್ಮ ತವರು ಇಂಧೋರ್ ನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ನಿತಿನ್ ಗೆ ಚಿಕ್ಕ ಮಗುವಿದೆ. ಜೊತೆಗೆ ಪತ್ನಿ, ತಾಯಿಯ ಆರೋಗ್ಯ ನೋಡಿಕೊಳ್ಳಬೇಕಿದೆ. ಹೀಗಾಗಿ ಸಂಷಕ್ಟದ ಸಮಯದಲ್ಲಿ ಕುಟುಂಬದ ಜೊತೆಗಿರಲು ಐಪಿಎಲ್ ನಿಂದ ಹೊರಬರಲು ನಿರ್ಧರಿಸಿದ್ದಾರೆ ಎಂದು ಬಿಸಿಸಿಐ ಹೇಳಿದೆ.