ಕೊರೋನಾ ಭೀತಿ: ಐಪಿಎಲ್ ಕ್ರಿಕೆಟಿಗರಿಗೆ ಮತ್ತಷ್ಟು ಕಠಿಣ ನಿಯಮ

ಗುರುವಾರ, 29 ಏಪ್ರಿಲ್ 2021 (09:49 IST)
ಮುಂಬೈ: ಕೊರೋನಾ ನಡುವೆಯೂ ಐಪಿಎಲ್ 14 ಆಯೋಜಿಸುತ್ತಿರುವ ಬಿಸಿಸಿಐ ಈಗ ಮತ್ತಷ್ಟು ಕಠಿಣ ಬಯೋ ಬಬಲ್ ನಿಯಮಗಳನ್ನು ಜಾರಿಗೆ ತಂದಿದೆ.


ಈಗಾಗಲೇ ಕ್ರಿಕೆಟಿಗರು ಕೊರೋನಾದಿಂದ ಸುರಕ್ಷಿತವಾಗಿರಲು ಬಯೋ ಬಬಲ್ ವಾತಾವರಣದಲ್ಲಿದ್ದಾರೆ. ಆದರೆ ಇದಕ್ಕೆ ಇನ್ನಷ್ಟು ಕಠಿಣ ನಿಯಮಗಳನ್ನು ಸೇರಿಸಲಾಗಿದೆ.

ಇನ್ನು ಮುಂದೆ ಕ್ರಿಕೆಟಿಗರು ಪ್ರತೀ ಎರಡು ದಿನಗಳಿಗೊಮ್ಮೆ ಆರ್ ಟಿಪಿಸಿಆರ್ ಪರೀಕ್ಷೆಗೊಳಪಡಬೇಕು. ಇದುವರೆಗೆ ಐದು ದಿನಗಳಿಗೊಮ್ಮೆ ಪರೀಕ್ಷೆ ನಡೆಸಲಾಗುತ್ತಿತ್ತು. ಹೊರಗಿನ ಆಹಾರ ಬಯೋ ಬಬಲ್ ವಾತಾವರಣದೊಳಗೆ ಪ್ರವೇಶಿಸುವಂತಿಲ್ಲ. ಇದರ ಜೊತೆಗೆ ಕ್ರಿಕೆಟಿಗರು ಮೇ 1 ರಿಂದ ವ್ಯಾಕ್ಸಿನೇಷನ್ ಗೊಳಗಾಗುತ್ತಾರೆಯೇ ಎಂಬುದು ಅವರಿಗೆ ಬಿಟ್ಟಿದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ