ಆರ್ ಸಿಬಿಗೆ ಬಂದ ಕಿಂಗ್ ಕೊಹ್ಲಿ: ಫ್ಯಾನ್ಸ್ ಖುಷ್
ನಿನ್ನೆಯಷ್ಟೇ ವಿರಾಟ್ ಕೊಹ್ಲಿ ಮುಂಬೈನಲ್ಲಿ ನಡೆಯುತ್ತಿರುವ ತಂಡದ ತರಬೇತಿ ಕ್ಯಾಂಪ್ ಸೇರಿದ್ದಾರೆ. ಕೊಹ್ಲಿ ಬಂದಿಳಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಆರ್ ಸಿಬಿ ಕಿಂಗ್ ಬಂದಾಯ್ತು ಎಂದು ಬರೆದುಕೊಂಡಿದೆ.
ಇನ್ನು, ವಿರಾಟ್ ತಂಡವನ್ನು ಕೂಡಿಕೊಂಡ ವಿಚಾರ ಅಭಿಮಾನಿಗಳಲ್ಲೂ ಪುಳಕ ತಂದಿದೆ. ಕಳೆದ ಋತುವಿನವರೆಗೆ ತಂಡದ ನಾಯಕರಾಗಿದ್ದ ಕೊಹ್ಲಿ ಈ ಬಾರಿ ಕೇವಲ ಆಟಗಾರನಾಗಿ ಮಿಂಚಲಿದ್ದಾರೆ.