ಫಿಟ್ನೆಸ್ ಟೆಸ್ಟ್ ಪಾಸಾದ ಹಾರ್ದಿಕ್, ಸಿಎಸ್ ಕೆ ಋತುರಾಜ್ ವಾಪಸ್
ಐಪಿಎಲ್ 2022 ರಲ್ಲಿ ಆಡುವ ಮೊದಲು ಎನ್ ಸಿಎಗೆ ತೆರಳಿ ಯೋ ಯೋ ಟೆಸ್ಟ್ ಪಾಸು ಮಾಡಬೇಕು ಎಂದು ಹಾರ್ದಿಕ್ ಗೆ ಬಿಸಿಸಿಐ ಖಡಕ್ ಸೂಚನೆ ಕೊಟ್ಟಿತ್ತು. ಅದರಂತೆ ಎನ್ ಸಿಎನಲ್ಲಿ ಕಡ್ಡಾಯ 10 ಓವರ್ ಬೌಲಿಂಗ್ ಮಾಡಿ ಹಾರ್ದಿಕ್ ಎಲ್ಲಾ ರೀತಿಯ ಟೆಸ್ಟ್ ಗಳಲ್ಲಿ ಉತ್ತಮ ಅಂಕ ಪಡೆದು ಫಿಟ್ನೆಸ್ ಪಾಸ್ ಮಾಡಿದ್ದಾರೆ.
ಇತ್ತ ಗಾಯದ ಸಮಸ್ಯೆಯಿಂದಾಗಿ ಚೆನ್ನೈ ತಂಡದ ಆರಂಭಿಕ ಋತುರಾಜ್ ಗಾಯಕ್ ವಾಡ್ ಕೂಡಾ ಆರಂಭಿಕ ಪಂದ್ಯಗಳಿಗೆ ಅನುಮಾನ ಎನ್ನಲಾಗಿತ್ತು. ಆದರೆ ಅವರೂ ಈಗ ಫಿಟ್ ಆಗಿ ಸಿಎಸ್ ಕೆ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ಮಾತ್ರ ಮೊದಲ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ರನ್ನು ಮಿಸ್ ಮಾಡಿಕೊಳ್ಳಲಿದೆ.