ಮಗಳು ವಮಿಕಾ ಜೊತೆ ಮುಂಬೈಗೆ ಬಂದಿಳಿದ ವಿರಾಟ್ ದಂಪತಿ

ಮಂಗಳವಾರ, 20 ಏಪ್ರಿಲ್ 2021 (10:26 IST)
ಮುಂಬೈ: ಐಪಿಎಲ್ 14 ರ ಮುಂದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಮಿಕಾ ಜೊತೆಗೆ ಮುಂಬೈಗೆ ಬಂದಿಳಿದಿದ್ದಾರೆ.


ಆರ್ ಸಿಬಿಯ ಮುಂದಿನ ಪಂದ್ಯಗಳು ಮುಂಬೈನಲ್ಲಿ ನಡೆಯಲಿದ್ದು, ಈ ಪಂದ್ಯಗಳಲ್ಲಿ ಜೊತೆಗಿರಲು ವಿರಾಟ್ ಜೊತೆಗೆ ಅನುಷ್ಕಾ ಹಾಗೂ ಪುತ್ರಿ ಕೂಡಾ ಸಾಥ್ ನೀಡಿದ್ದಾರೆ. ವಮಿಕಾಳನ್ನು ಅನುಷ್ಕಾ ಎದೆಗವಚಿಕೊಂಡು ಹಿಡಿದುಕೊಂಡಿದ್ದು, ಫೋಟೋಗ್ರಾಫರ್ ಗಳ ಕಣ್ಣಿಗೆ ಬೀಳದಂತೆ ರಕ್ಷಿಸಿದ್ದಾರೆ.

ಮೂರು ಪಂದ್ಯಗಳ ಪೈಕಿ ಮೂರನ್ನೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಮುಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ