ಯುವರಾಜ್ ಸಿಂಗ್ ರನ್ನು ಮೂಲೆಗುಂಪು ಮಾಡಿ ಅಶ್ವಿನ್ ಗೆ ಪಂಜಾಬ್ ನಾಯಕತ್ವ ನೀಡಿದ್ದರ ರಹಸ್ಯ ಬಯಲು!
‘ನಾನು ಯಾವತ್ತೂ ಒಬ್ಬ ಬೌಲರ್ ನನ್ನು ನಾಯಕ ಮಾಡಬೇಕೆಂದು ಬಯಸಿದ್ದೆ. ಒಬ್ಬ ಬೌಲರ್ ಬೆಸ್ಟ್ ಕ್ಯಾಪ್ಟನ್ ಆಗಬಲ್ಲ. ವಾಸಿಂ ಅಕ್ರಂ, ಕಪಿಲ್ ದೇವ್ ಮುಂತಾದ ಘಟಾನುಘಟಿ ಬೌಲರ್ ಕಮ್ ನಾಯಕರ ಅಭಿಮಾನಿ ನಾನು’ ಎಂದು ವೀರೂ ಹೇಳಿದ್ದಾರೆ. ಅದೇ ಕಾರಣಕ್ಕೆ ಅಶ್ವಿನ್ ಗೆ ಮಣೆ ಹಾಕಲಾಯಿತು ಎಂದಿದ್ದಾರೆ.
ಯುವರಾಜ್ ಸಿಂಗ್ ಕೂಡಾ ಪಂಜಾಬ್ ನಾಯಕತ್ವದ ರೇಸ್ ನಲ್ಲಿದ್ದರು. ಆದರೆ ಅತೀ ಹೆಚ್ಚು ವೋಟ್ ಸಿಕ್ಕಿದ್ದು ಅಶ್ವಿನ್ ಗೆ. ಅದಕ್ಕೇ ಅವರು ನಾಯಕರಾದರು ಎಂದಿದ್ದಾರೆ ಸೆಹ್ವಾಗ್.