ಎಡವಟ್ಟು ಮೆಸೇಜ್ ಮಾಡಿ ಕೊನೆಗೆ ಕ್ಷಮೆ ಕೇಳಿದ ವೀರೇಂದ್ರ ಸೆಹ್ವಾಗ್
ಟ್ವೀಟ್ ನಲ್ಲಿ ಆರೋಪಿಗಳ ಹೆಸರು ಬರೆಯುವಾಗ ವೀರೂ ಕೇವಲ ಮುಸ್ಲಿಂ ವ್ಯಕ್ತಿಗಳ ಹೆಸರು ಬರೆದಿದ್ದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮತ್ತೊಂದು ಟ್ವೀಟ್ ಮಾಡಿ ಕ್ಷಮೆ ಕೇಳಿದ ವೀರೂ ತಮ್ಮ ಉದ್ದೇಶ ಕೋಮುವಾದವಲ್ಲ, ಹೀನಾಯ ಕೃತ್ಯವನ್ನು ಖಂಡಿಸುವುದಷ್ಟೇ ಎಂದು ಸಮರ್ಥನೆ ನೀಡಿದ್ದಾರೆ.