ಹಣದುಬ್ಬರ ದರ ಏರಿಕೆಯಿಂದ ಇಕ್ಕಟ್ಟಿಗೆ ಸಿಲುಕಿರುವ ಭಾರತೀಯ ರಿಸರ್ವ್ ಬ್ಯಾಂಕ್, ಮೊದಲ ತ್ರೈಮಾಸಿಕ ಪರಿಷ್ಕರಣ ಸಭೆಯಲ್ಲಿ ಮತ್ತೆ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಬ್ಯಾಕಿಂಗ್ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್, ಹಣದುಬ್ಬರ ದರ ಏರಿಕೆ ನಿಯಂತ್ರಣಕ್ಕಾಗಿ 25 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರಗಳಲ್ಲಿ ಏರಿಕೆ ಮಾಡುವ ನಿರೀಕ್ಷೆಗಳಿವೆ ಎಂದು ಕೆನರಾ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕಿ ಅರ್ಚನಾ ಎಸ್.ಭಾರ್ಗವಾ ತಿಳಿಸಿದ್ದಾರೆ.
ದೇಶದ ಹಣದುಬ್ಬರ ದರ ಶೇ.5-6 ರಷ್ಟು ದರ ಸೂಕ್ತವಾಗಿರುತ್ತದೆ. ಆದರೆ, ಕಳೆದ ಜೂನ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.9.44ಕ್ಕೆ ಏರಿಕೆಯಾಗಿರುವುದು ಆರ್‌ಬಿಐಗೆ ನುಂಗಲಾರದ ತುತ್ತಾಗಿದೆ.
ದರ ಏರಿಕೆ ನಿಯಂತ್ರಣಕ್ಕಾಗಿ ಸಮರ ಸಾರಿರುವ ಆರ್‌ಬಿಐ, ಕಳೆದ ಮಾರ್ಚ್ 2010ರಿಂದ 10 ಬಾರಿ ಅಥವಾ 275 ಬೇಸಿಸ್ ಪಾಯಿಂಟ್‌ಗಳಷ್ಟು ರೆಪೋ ದರಗಳಲ್ಲಿ ಏರಿಕೆಗೊಳಿಸಿ ಆದೇಶ ಹೊರಡಿಸಿದೆ.
ಹಣದುಬ್ಬರ ದರ ಗರಿಷ್ಠ ಏರಿಕೆ ಕಂಡಿದ್ದರಿಂದ, ರಿಸರ್ವ್ ಬ್ಯಾಂಕ್‌ಗದೆ ರೆಪೋ ದರಗಳ ಏರಿಕೆ ಹೊರತುಪಡಿಸಿ ಬೇರೆ ದಾರಿಯಿಲ್ಲ ಎಂದು ಕೊಟಾಕ್ ಮಹೀಂದ್ರಾ ಬ್ಯಾಂಕ್ ಗ್ರೂಪ್ ಮುಖ್ಯ ಹಣಕಾಸು ಅಧಿಕಾರಿ ಜೈಮಿನ್ ಭಟ್ ಹೇಳಿದ್ದಾರೆ.