ಹೊಸ ವರ್ಷದಂದು 160 ಮಿಲಿಯನ್ ಭಾರತೀಯರಿಂದ 14 ಬಿಲಿಯನ್ ವಾಟ್ಸಪ್ ಸಂದೇಶ ರವಾನೆ

ಶುಕ್ರವಾರ, 6 ಜನವರಿ 2017 (15:56 IST)
ಯುವಕ, ಯುವತಿಯರ ಆಕರ್ಷಣಿಯ ತಾಣವಾಗಿರುವ ವಾಟ್ಸಪ್‌ ಜನಪ್ರಿಯತೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಡಿಸೆಂಬರ್ 31, 2016 ಹೊಸ ವರ್ಷಾಚರಣೆಯ ಸಂದರ್ಭದಲ್ಲಿ 160 ಮಿಲಿಯನ್ ಭಾರತೀಯರು 14 ಬಿಲಿಯನ್ ವಾಟ್ಸಪ್‌ ಸಂದೇಶಗಳನ್ನು ರವಾನಿಸಿ ಇತಿಹಾಸ ಸೃಷ್ಟಿಸಿದ್ದಾರೆ.
 
ಭಾರತದಲ್ಲಿ 160 ಮಿಲಿಯನ್ ವಾಟ್ಸಪ್‌ ಬಳಕೆದಾರರಿದ್ದು, ವಿಶೇಷ ದಿನಗಳಲ್ಲಿ ವಾಟ್ಸಪ್ ಸಂದೇಶಗಳ ಸುರಿಮಳೆಯಾಗುತ್ತದೆ. ಯುವಕ ಯುವತಿಯರು ವಾಟ್ಸಪ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಸಂಸ್ಥೆ ತಿಳಿಸಿದೆ. 
 
ಇನ್‌ಸ್ಟಂಟ್ ಮ್ಯಾಸೆಂಜಿಂಗ್ ಗ್ರೂಪ್ ಪ್ರಕಾರ, ಪ್ರತಿ ವರ್ಷ ಹೊಸ ವರ್ಷಾಚರಣೆಯ ದಿನದಂದು ವಾಟ್ಸಪ್ ಸಂದೇಶ ರವಾನೆಯಲ್ಲಿ ಹೆಚ್ಚಳವಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ 8 ಬಿಲಿಯನ್ ಸಂದೇಶಗಳನ್ನು ರವಾನಿಸಲಾಗಿತ್ತು. ಒಟ್ಟು ಸಂದೇಶಗಳಲ್ಲಿ ಶೇ.32 ರಷ್ಟು ಸಂದೇಶಗಳು ಫೋಟೋ, ವಿಡಿಯೋ ಮತ್ತು ವೈಸ್ ಮ್ಯಾಸೆಜ್‌ಗಳಿರುತ್ತವೆ ಎಂದು ತಿಳಿಸಿದೆ.
 
ಹಬ್ಬದ ದಿನಗಳು, ವಿಶೇಷ ಸಂದರ್ಭಗಳು, ಗೆಳೆಯರು ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸಪ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮುಂದುವರಿದಿದೆ ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ