ಬಿಹಾರ ಚುನಾವಣೆ ಸಂದರ್ಭದಲ್ಲೇ ರಾಹುಲ್ ಗಾಂಧಿ ಎಲ್ಲೋದ್ರು, ಶುರುವಾಗಿದೆ ಹೊಸ ಚರ್ಚೆ

Krishnaveni K

ಸೋಮವಾರ, 27 ಅಕ್ಟೋಬರ್ 2025 (11:09 IST)
ನವದೆಹಲಿ: ಒಂದೆಡೆ ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟವನ್ನು ಸೋಲಿಸಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಆದರೆ ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲೋದ್ರು ಎಂಬ ಚರ್ಚೆ ಶುರುವಾಗಿದೆ.


ಪ್ರಮುಖ ಸಂದರ್ಭಗಳಲ್ಲೇ ರಾಹುಲ್ ಗಾಂಧಿ ವಿದೇಶ ಯಾತ್ರೆ ಮಾಡುತ್ತಾರೆ ಎಂಬ ಅಪವಾದ ಅವರ ಮೇಲಿದೆ. ಇದೀಗ ಬಿಹಾರ ಚುನಾವಣೆ ಸಂದರ್ಭದಲ್ಲಿ ಮಿತ್ರ ಪಕ್ಷ ಆರ್ ಜೆಡಿ ಜೊತೆಗೆ ನಿಂತು ಜೆಡಿಯು-ಬಿಜೆಪಿ ಮತ್ತೆ ಅಧಿಕಾರಕ್ಕೆ ಬಾರದಂತೆ ರಾಹುಲ್ ಶ್ರಮಿಸಬೇಕಿತ್ತು.

ಆದರೆ ವೋಟ್ ಚೋರಿ ಯಾತ್ರೆ ಮಾಡಿದ ಬಳಿಕ ಬಿಹಾರದಲ್ಲಿ ರಾಹುಲ್ ಹೆಚ್ಚು ಕಾಣಿಸಿಕೊಂಡಿಲ್ಲ. ಬಿಹಾರದಲ್ಲಿ ಆರ್ ಜೆಡಿ ಜೊತೆಗೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಾದಾಗಲೂ ರಾಹುಲ್ ಗಾಂಧಿ ಖುದ್ದಾಗಿ ಮಾತುಕತೆ ನಡೆಸಲಿಲ್ಲ.

ಬಿಹಾರದಲ್ಲಿ ನವಂಬರ್ 6 ಮತ್ತು 11 ರಂದು ಚುನಾವಣೆ ನಡೆಯಲಿದೆ. ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಿಹಾರದಲ್ಲಿ ಸಕ್ರಿಯವಾಗಿರಬೇಕಿತ್ತು. ಆದರೆ ಅವರ ಗೈರು ಪರಿಣಾಮ ಬೀರಲಿದೆ ಎಂದು ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಅಸಮಾಧಾನವಿದೆ ಎಂಬ ಮಾತು ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ