ಆನ್‌ಲೈನ್ ಶಾಪಿಂಗ್‌ಗೆ ಶೇ. 80ರಷ್ಟು ಗ್ರಾಹಕರ ಆದ್ಯತೆ

ಶುಕ್ರವಾರ, 20 ಮೇ 2016 (13:34 IST)
ಆನ್‌ಲೈನ್ ಶಾಪಿಂಗ್ ಈಗ ಗ್ರಾಹಕರಲ್ಲಿ ಜನಪ್ರಿಯವಾಗಿದ್ದು, ಶೇ. 80ರಷ್ಟು ಖರೀದಿದಾರರು ತಮ್ಮ ನೆಚ್ಚಿನ ಉತ್ಪನ್ನಗಳ ಖರೀದಿಗೆ ವಿವಿಧ ಅಂಗಡಿಗಳಿಗೆ ಭೇಟಿ ನೀಡುವ ಬದಲಿಗೆ ಅಂತರ್ಜಾಲದಲ್ಲಿ ಶಾಪಿಂಗ್ ಮಾಡಲು ಆದ್ಯತೆ ನೀಡುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ.
 
ಯಾಹೂ ಮತ್ತು ಮೈಂಡ್ ಶೇರ್ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಗ್ರಾಹಕರ ಶಾಪಿಂಗ್ ನಡವಳಿಕೆಯನ್ನು ವಿಶ್ಲೇಷಿಸಿದ್ದು, ಶೇ. 31ರಷ್ಟು ಖರೀದಿದಾರರು ಅಂಗಡಿಗೆತೆರಳಿ ಉತ್ಪನ್ನವನ್ನು ಮುಖತಃ ಖರೀದಿ ಮಾಡುವುದಕ್ಕೆ ಉಂಟಾಗುವ ಶ್ರಮ ಮತ್ತು ವೆಚ್ಚವನ್ನು ಉಳಿಸಲು ಆನ್‌ಲೈನ್ ಶಾಪಿಂಗ್‌ಗೆ ಆದ್ಯತೆ ನೀಡುತ್ತಾರೆ. 
 
ಶೇ.28ರಷ್ಟು ಗ್ರಾಹಕರು ಡಿಸ್ಕೌಂಟ್ ಮತ್ತು ಪ್ರೊಮೋಷನ್ ಲಭ್ಯತೆ ಕಾರಣದಿಂದ ಆನ್‌ಲೈನ್‌ನಿಂದ ಪ್ರೇರೇಪಿತರಾಗಿದ್ದಾರೆ ಮತ್ತು ಶೇ. 21 ಜನರನ್ನು ಎಲ್ಲಿ ಬೇಕಾದರೂ, ಯಾವ ಸಮಯದಲ್ಲಾದರೂ ಶಾಪಿಂಗ್ ಅನುಕೂಲದಿಂದ ಆನ್‌ಲೈನ್ ಶಾಪಿಂಗ್‌ಗೆ ಆದ್ಯತೆ ನೀಡುತ್ತಾರೆ. 
ಇತರೆ ವಿದ್ಯುನ್ಮಾನ ಉಪಕರಣಗಳಿಗೆ ಬದಲಾಗಿ ಹೆಚ್ಚೆಚ್ಚು ಗ್ರಾಹಕರು ಆನ್‌ಲೈನ್ ಖರೀದಿ ಮಾಡಲು ಮೊಬೈಲ್ ಫೋನ್‌ಗಳಿಗೆ ಹೇಗೆ ಮೊರೆಹೋಗುತ್ತಾರೆ ಎಂಬುದರ ಬಗ್ಗೆಯೂ ಅಧ್ಯಯನ ಗಮನಸೆಳೆದಿದೆ. 
 
ಭಾರತದಲ್ಲಿ ಈ-ವಾಣಿಜ್ಯ ದೃಶ್ಯವು ಅತ್ಯಂತ ಸೃಜನಶೀಲವಾಗಿದ್ದು, ಶೀಘ್ರವಾಗಿ ದೊರೆಯುವ ಮೊಬೈಲ್ ವ್ಯವಸ್ಥೆಯಿಂದ ಇದು ಸಾಧ್ಯವಾಗಿದೆ.ಸಮೀಕ್ಷೆಯ ಪ್ರಕಾರ, ಬಹುತೇಕ ಗ್ರಾಹಕರು ವಿದ್ಯುನ್ಮಾನ ಉಪಕರಣಗಳು, ಬೇಬಿ ಮತ್ತು ಪೆಟ್ ಕೇರ್ ಉತ್ಪನ್ನಗಳ ಖರೀದಿಗೆ ಮೊಬೈಲ್ ಉಪಕರಣಗಳನ್ನು ಬಳಸುತ್ತಾರೆ.ಶೇ. 90ರಷ್ಟು ಗ್ರಾಹಕರು ಪ್ರವಾಸ, ಸಂಗೀತ ಮತ್ತು ಚಲನಚಿತ್ರಗಳಿಗೆ ಮೊಬೈಲ್ ಉಪಕರಣದ ಮೂಲಕ ಬುಕ್ ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಶೇ. 36ರಷ್ಟು ಜನರು ಅತ್ಯಧಿಕ ಪರಿಗಣನೆಯ ಉತ್ಪನ್ನಗಳಾದ ವಿಮೆ ಮುಂತಾದುವನ್ನು ಪಿಸಿ ಅಥವಾ ಲ್ಯಾಪ್‌ಟಾಪ್ ಮೂಲಕ ಖರೀದಿಸಲು ಬಯಸುತ್ತಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

 

ವೆಬ್ದುನಿಯಾವನ್ನು ಓದಿ