ನಮ್ಮ ಜಿಹಾದಿಗಳ ಮುಂದೆ ಎದುರಾಳಿಯ ಕ್ಷಿಪಣಿಗಳು ಲೆಕ್ಕಕ್ಕೇ ಇಲ್ಲ: ಉಗ್ರ ಮಸೂದ್ ಅಜರ್
ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ನೀಡಿರುವ ಈ ಹೇಳಿಕೆಯನ್ನು ಮಸೀದಿಗಳಲ್ಲಿ ಪ್ರಸಾರ ಮಾಡಲಾಗಿದೆ ಎನ್ನಲಾಗಿದೆ. ಸದ್ಯಕ್ಕೆ ಈತ ಪಾಕಿಸ್ತಾನದಲ್ಲೇ ಬೆಚ್ಚಗೆ ಅಡಗಿ ಕೂತಿದ್ದಾನೆ. ಇದೀಗ ಭಾರತದ ವಿರುದ್ಧ ಉಗ್ರರನ್ನು ಛೂ ಬಿಡುವ ಕೆಲಸ ಮಾಡುತ್ತಿದ್ದಾನೆ.
ಮೊನ್ನೆಷ್ಟೇ ಆಪರೇಷನ್ ಸಿಂಧೂರ್ ವೇಳೆ ಮಸೂದ್ ಅಜರ್ ನ ಕುಟುಂಬಸ್ಥರನ್ನೆಲ್ಲಾ ಭಾರತೀಯ ಸೇನೆ ಕೊಂದು ಹಾಕಿತ್ತು. ಇದೀಗ ಭಾರತದ ವಿರುದ್ಧ ವಿಷ ಕಾರಿದ್ದಾನೆ. ಮುಜಾಹಿದ್ ಗಳಿಗೆ ಬಂದ ಹಣವನ್ನು ಜಿಹಾದ್ ಗೆ ಬಳಕೆ ಮಾಡಲಾಗುತ್ತದೆ. ಪಾಕಿಸ್ತಾನಕ್ಕೆ ಮುಜಾಹಿದ್ ಆಶೀರ್ವಾದ ಬೇಕು.
ನಮ್ಮಲ್ಲಿ 30000 ಹೋರಾಟಗಾರರ ತಂಡ ಸಿದ್ಧವಿದೆ. ಅವರನ್ನು ಬಂಧಿಸಲು ಯಾವುದೇ ಗಡಿ, ಕ್ಷಿಪಣಿಗಳಿಗೆ ಸಾಧ್ಯವಿಲ್ಲ. ಅವರು ಜಿಹಾದ್ ಗೆ ಸಿದ್ಧವಾಗಿದ್ದಾರೆ. ಭಾರತಕ್ಕೇ ಆತ ಈ ಎಚ್ಚರಿಕೆಯ ಸಂದೇಶ ರವಾನಿಸಿದ್ದಾನೆ ಎನ್ನಲಾಗಿದೆ.