ಏರ್ಟೆಲ್ ತನ್ನ ಡಿಜಿಟಲ್ ಟಿವಿ ಗ್ರಾಹಕರಿಗಾಗಿ ಬಿಡುಗಡೆ ಮಾಡಿದೆ ಈ ಹೊಸ ಪ್ಲಾನ್ ಗಳು

ಭಾನುವಾರ, 26 ಮೇ 2019 (06:56 IST)
ಬೆಂಗಳೂರು : ಏರ್ಟೆಲ್ ತನ್ನ ಡಿಜಿಟಲ್ ಟಿವಿ ಗ್ರಾಹಕರಿಗಾಗಿ  ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್ ಗಳಲ್ಲಿ ನೀವು ನಿಮಗಿಷ್ಟದ ಚಾನೆಲ್ ಗಳನ್ನು ವೀಕ್ಷಣೆ ಮಾಡಬಹುದು.
Gujarat Value Sports SD Pack : ಈ ಪ್ಲಾನ್ 6 ತಿಂಗಳ ವ್ಯಾಲಿಡಿಟಿಯನ್ನು  ಹೊಂದಿದೆ. ಆದರೆ 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿಯನ್ನು ಕಂಪನಿ ಗ್ರಾಹಕರಿಗೆ ನೀಡ್ತಿದೆ. ಇದರಲ್ಲಿ ಪ್ರತಿತಿಂಗಳು 336 ರೂಪಾಯಿ ಪಾವತಿಸಬೇಕು.


Gujarat Value Sports HD ಮತ್ತು Gujarat Mega HD : ಇವೆರಡೂ ಹೆಚ್ ಡಿ ಪ್ಯಾಕ್ ಗಳಲ್ಲಿ Gujarat Value Sports HDಗೆ ಪ್ರತಿ ತಿಂಗಳು ಗ್ರಾಹಕ 475 ರೂಪಾಯಿ ಪಾವತಿ ಮಾಡಬೇಕು. ಇದು 6 ತಿಂಗಳ ವ್ಯಾಲಿಡಿಟಿಯನ್ನು  ಹೊಂದಿದೆ.  ಹಾಗೂ Gujarat Mega HD ಪ್ಯಾಕ್ ಗೆ 699 ರೂಪಾಯಿ ಪಾವತಿ ಮಾಡಬೇಕು.ಇದು 12 ತಿಂಗಳ ವ್ಯಾಲಿಡಿಟಿಯನ್ನು  ಹೊಂದಿದೆ. 


Hindi Value SD Pack : ಈ ಪ್ಲಾನ್ ಕೂಡ 6 ತಿಂಗಳ ಸಿಂಧುತ್ವ ಹೊಂದಿರಲಿದೆ. ಇದ್ರ ಬೆಲೆ ತಿಂಗಳಿಗೆ 280 ರೂಪಾಯಿ.
UDP Pack: : ಈ ಪ್ಲಾನ್ ಗಾಗಿ ಬಳಕೆದಾರರು ಪ್ರತಿ ತಿಂಗಳು 799 ರೂಪಾಯಿ ಪಾವತಿಸಬೇಕಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ