ಬ್ರಾಡ್ ​ಬ್ಯಾಂಡ್​ ಸೇವೆಯನ್ನು ಪರಿಷ್ಕರಿಸಿದ ಏರ್ಟೆಲ್

ಶನಿವಾರ, 24 ಆಗಸ್ಟ್ 2019 (09:13 IST)
ನವದೆಹಲಿ : ಏರ್ಟೆಲ್ ಜಿಯೋ ಕಂಪೆನಿಯ ಗಿಗಾ ಫೈಬರ್​ಗೆ ಸೆಡ್​ ಹೊಡೆಯಲು ತನ್ನ ಬ್ರಾಡ್ ​ಬ್ಯಾಂಡ್​ ಸೇವೆಯಲ್ಲಿನ ಡೇಟಾವನ್ನು ಮತ್ತಷ್ಟು ಪರಿಷ್ಕರಿಸಿದ್ದು, ಆ ಮೂಲಕ ಮೂರು ಸೇವೆಯನ್ನು ಬಿಡುಗಡೆ ಮಾಡಿದೆ.




ಏರ್ಟೆಲ್ ​ ವಿ- ಬ್ರಾಡ್​ಬ್ಯಾಂಡ್​ ಸೇವೆಯ ರೂ. 799 ರ ಪ್ಲ್ಯಾನ್ ಒಂದು ತಿಂಗಳ ಕಾಲವಧಿಯನ್ನು ಹೊಂದಿದ್ದು, ಇದರ ಮೂಲಕ ಲ್ಯಾಂಡ್ ​ಲೈನ್​ ಟೆಲಿಫೋನ್​ ಸೇವೆ ಹಾಗೂ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಸೇವೆಯನ್ನು ಒದಗಿಸುತ್ತಿದೆ. ಅಲ್ಲದೇ ಆರು ತಿಂಗಳ ಅವಧಿಗೆ 200GB ಉಚಿತ ಡೇಟಾವನ್ನು ಬೋನಸ್​ ನೀಡಲಿದೆ. ಇದರಲ್ಲಿ ಇಂಟರ್ ​​ನೆಟ್​ ಸ್ಟೀಡ್​ 40Mbps ​ ವೇಗದಲ್ಲಿರುತ್ತದೆ. ಈ ಸೇವೆಯನ್ನು ಅಳವಡಿಸಿಕೊಂಡ ಗ್ರಾಹಕರು ಏರ್ಟೆಲ್ ​ ಟಿವಿ ಪ್ರಿಮಿಯಂ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.


ಏರ್ಟೆಲ್ ನ ರೂ.1099ರ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ತಿಂಗಳಿಗೆ 300GB ಡೇಟಾ ಸಿಗಲಿದೆ. ಈ ಸೇವೆಯಲ್ಲಿ ಇಂಟರ್​ ನೆಟ್​ ಸ್ಪೀಡ್​ 100mbps​ ಇರಲಿದೆ. ಜೊತೆಗೆ 6 ತಿಂಗಳಕಾಲ 500GB ಡೇಟಾ ಬೋನಸ್​ ರೂಪದಲ್ಲಿ ಸಿಗಲಿದೆ. ಜೊತೆಗೆ ಏರ್ಟೆಲ್ ​ ಥ್ಯಾಂಕ್ಸ್​ ಮೂಲಕ ಏರ್ಟೆಲ್ ​ ಎಕ್ಸ್​ ಟ್ರಿಮಿ ಮತ್ತು ಝೀ 5 ಪ್ರೀಮಿಯಂ ಸೇವೆಯನ್ನು ಹಾಗೂ ಅಮೆಜಾನ್​​ ಪ್ರೈಮ್​ ಸಬ್​ಸ್ಕ್ರಿಪ್ಷನ್​​ ಮೂಲಕ ಮೂರು ತಿಂಗಳ ಕಾಲ ನೆಟ್ ​ಫ್ಲಿಕ್​ ಮೆಂಬರ್​ ಶಿಪ್​ ಅವಕಾಶವನ್ನು ಪಡೆಯಬಹುದಾಗಿದೆ.


ಏರ್ಟೆಲ್ ನ ರೂ.1599ರ ಪ್ಲ್ಯಾನ್ ನಲ್ಲಿ ತಿಂಗಳಿಗೆ 600GB ಡೇಟಾದ ಜೊತೆಗೆ 300 mbps​ಸ್ಟೀಡ್ ​ನಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ. ನಂತರ ಆರು ತಿಂಗಳ ಕಾಲವಕಾಶದ 1000GB ಇಂಟರ್​ ನೆಟ್​ ಸೇವೆಯನ್ನು ಒದಗಿಸುತ್ತಿದೆ. ಹಾಗೇ ​ಲೈನ್​ ಫೋನ್​​ ಹಾಗೂ ಅನಿಯಮಿತ​ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕರೆ ಉಚಿತವಾಗಿ ದೊರೆಯಲಿದೆ. ಏರ್ಟೆಲ್ ​ ಥ್ಯಾಂಕ್ಸ್​ ಮೂಲಕ ಝೀ5 ಪ್ರಿಮಿಯಂ ಹಾಗೂ ಒಂದು ವರ್ಷದ ಅಮೆಜಾನ್​ ಪ್ರೈಮ್​ ಸಬ್ ​​ಸ್ಕ್ರಿಪ್ಷನ್​ ಜೊತೆಗೆ ಮೂರು ತಿಂಗಳ ಕಾಲ ನೆಟ್ ​ಫ್ಲಿಕ್ಸ್​ ಅನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ