ಗ್ರಾಹಕರನ್ನು ಸೆಳೆಯುವಲ್ಲಿ ಏರ್ಟೆಲ್ ನ್ನು ಹಿಂದಿಕ್ಕಿದ ಜಿಯೋ

ಭಾನುವಾರ, 21 ಜುಲೈ 2019 (09:24 IST)
ನವದೆಹಲಿ : ಭಾರತದ ಟೆಲಿಕಾಂ ಕಂಪೆನಿಗಳಲ್ಲಿ ಯಾವ ಕಂಪೆನಿಗಳು ಗ್ರಾಹಕರನ್ನು ಸೆಳೆಯುವುದರ ಮೂಲಕ ಯಾವ ಸ್ಥಾನ ಪಡೆದುಕೊಂಡಿವೆ  ಎಂಬ ಮಾಹಿತಿಯನ್ನು ಇದೀಗ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಿಳಿಸಿದೆ.
ಮೂರು ವರ್ಷಗಳ ಹಿಂದೆ ಟೆಲಿಕಾಂ ರಂಗಕ್ಕೆ ಕಾಲಿಟ್ಟ ಜಿಯೋ 2ನೇ ಸ್ಥಾನ ಪಡೆಯುವುದರ ಮೂಲಕ , ಒಂದು ಕಾಲದಲ್ಲಿ ಭಾರತ ದೇಶದಾದ್ಯಂತ ಅಧಿಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಭಾರ್ತಿ ಏರ್ಟೆಲ್ ಟೆಲಿಕಾಂ ಕಂಪೆನಿಯನ್ನು 3ನೇ ಸ್ಥಾನಕ್ಕೆ ಇಳಿಸಿದೆ.
ಜಿಯೋ 32.2 ಕೋಟಿ ಗ್ರಾಹಕರನ್ನು ಹೊಂದಿದ್ದು,  2ನೇ ಸ್ಥಾನದಲ್ಲಿದ್ದರೆ, 38.76 ಕೋಟಿ ಗ್ರಾಹಕರಿರುವ ವೊಡಾಫೋನ್‌ - ಐಡಿಯಾ ನಂ.1 ಸ್ಥಾನದಲ್ಲಿದೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಿಳಿಸಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ