ಮೊಬೈಲ್ ಸಂಖ್ಯೆ ಬಳಸಿ UPI ಮೂಲಕ ಹಣ ಪಾವತಿಸಲು ಅವಕಾಶ

ಶುಕ್ರವಾರ, 24 ಮಾರ್ಚ್ 2023 (19:19 IST)
ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿ 10 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು ಸದ್ಯದಲ್ಲೇ ಅಲ್ಲಿ ತಾವು ಬಳಸುವ ವಿದೇಶಿ ಮೊಬೈಲ್ ಸಂಖ್ಯೆಗಳ ಹಣ ವರ್ಗಾವಣೆ ಮಾಡಬಹುದು. ಭಾರತದಲ್ಲಿ ಬಳಕೆಯಲ್ಲಿರುವ UPI ಆ್ಯಪ್​ಗಳಲ್ಲಿ ನೋಂದಾಯಿಸಿಕೊಂಡು ಹಣ ವ್ಯವಹಾರಗಳನ್ನು ನಡೆಸುವ ಅನುಕೂಲ ಸಿಗಲಿದೆ. 2023ರ ಏಪ್ರಿಲ್​ 30ರಿಂದ ಈ ಸೌಲಭ್ಯ ಜಾರಿಗೆ ಬರಲಿದೆ. ಈ ಕುರಿತಂತೆ, UPI ಅಭಿವೃದ್ಧಿಪಡಿಸಿರುವ ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯು ಪ್ರಕಟಣೆಯನ್ನು ನೀಡಿದೆ. UAE ಸೇರಿ ವಿಶ್ವದ 10 ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರು, ತಾವು ಬಳಸುವ NRE ಅಥವಾ NRO ಮಾದರಿಯ ಬ್ಯಾಂಕ್ ಖಾತೆಗಳಿಗೆ ಜೋಡಿಸಲ್ಪಟ್ಟಿರುವ ಆ ದೇಶಗಳ ಮೊಬೈಲ್ ನಂಬರ್​ಗಳನ್ನು ಬಳಸಿ UPI ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಆ ನಂಬರ್​​ಗಳನ್ನು ಬಳಸಿಯೇ ಹಣದ ವಹಿವಾಟು ನಡೆಸಬಹುದು ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ