ಪಾಕಿಸ್ತಾನ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಲಿದೆ. ಕೇವಲ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರವಲ್ಲದೆ ಬ್ರೆಡ್, ಹಾಲಿನಿಂದ ಹಿಡಿದು ಚಹಾದವರೆಗೂ ಎಲ್ಲದರ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಪೆಟ್ರೋಲ್ ಪಂಪ್ ಬಳಿ ಜನಜಂಗುಳಿ, ಜಗಳ ಸಾಮಾನ್ಯವಾಗಿಬಿಟ್ಟಿದೆ. ವಾಸ್ತವವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅದು ಜಾರಿಗೆ ಬರಲಿದೆ. ಪೆಟ್ರೋಲ್ ಬೆಲೆಯನ್ನು 22 ರೂ. ಏರಿಕೆ ಮಾಡಲು ನಿರ್ಧರಿಸಲಾಗಿದೆ. ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಶ್ರೀಲಂಕಾದಂತೆ ಬಹುತೇಕ ಖಾಲಿಯಾಗಿದೆ. ಕಳೆದ ವಾರದಲ್ಲಿ, ಇದು 3 ಬಿಲಿಯನ್‌ಗಿಂತ ಕಡಿಮೆಯಾಗಿದೆ, ಅಂದರೆ ಸರಳವಾಗಿ ಹೇಳುವುದಾದರೆ ದೇಶವನ್ನು ಒಂದು ತಿಂಗಳುಗಳ ಕಾಲ ನಡೆಸಲು ಸಾಕಾಗುವುದಿಲ್ಲ. ಆಹಾರ ಪದಾರ್ಥಗಳಿಂದ ಹಿಡಿದು ಪೆಟ್ರೋಲಿಯಂ ಉತ್ಪನ್ನಗಳವರೆಗೆ ಎಲ್ಲವನ್ನೂ ಆಮದು ಮಾಡಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಜನವರಿ 29ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಯಿತು. ಪೆಟ್ರೋಲ್ ಬೆಲೆ ಲೀಟರ್ಗೆ 249.80 ರೂ.ಗೆ ತಲುಪಿದ್ದರೆ, ಡೀಸೆಲ್ ಲೀಟರ್ಗೆ 262.80 ರೂ.ಗೆ ತಲುಪಿದೆ. ಈಗ ಮತ್ತೆ 22 ರೂ. ಹೆಚ್ಚಾಗುವ ನಿರೀಕ್ಷೆ ಇದೆ. ರಾಯಿಟರ್ಸ್ ವರದಿ ಪ್ರಕಾರ , ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು 22.20 ರೂ. ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಾದ ಬಳಿಕ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಲೀಟರ್ಗೆ 272 ರೂ.ಗೆ ಏರಿಕೆಯಾಗುತ್ತದೆ.