ಚಿನ್ನಾಭರಣಗಳಿಗೆ ಹಾಲ್‌ಮಾರ್ಕ್​ ಕಡ್ಡಾಯ

ಭಾನುವಾರ, 5 ಮಾರ್ಚ್ 2023 (16:17 IST)
ಭಾರತ ಸರ್ಕಾರವು ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಕಡ್ಡಾಯವಾದ HUID ಆಧಾರಿತ ಹಾಲ್‌ಮಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಚಿನ್ನವನ್ನು ಮಾರಾಟ ಮಾಡಲು ಹೊಸ ನಿಯಮಗಳನ್ನ ಜಾರಿಗೆ ತಂದಿರುವ ಭಾರತ ಸರ್ಕಾರ, ಗ್ರಾಹಕರನ್ನು ಮೋಸದ ಚಟುವಟಿಕೆಗಳಿಂದ ರಕ್ಷಿಸಲು ಮತ್ತು ರಾಷ್ಟ್ರವ್ಯಾಪಿ ಚಿನ್ನದ ಗುಣಮಟ್ಟದ ಸ್ಥಿರ ಮಾನದಂಡಗಳನ್ನು ಖಾತರಿಪಡಿಸಲು ಈ ನಿರ್ಧಾರ ಕೈಗೊಂಡಿದೆ. ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಮಾರ್ಚ್ 31ರಿಂದ ದೇಶದಲ್ಲಿ ಮಾರಾಟವಾಗುವ ಎಲ್ಲಾ ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ HUID ಗುರುತಿನ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಘೋಷಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ