ಆಪಲ್ ಬಿಡುಗಡೆಗೊಳಿಸುತ್ತಿದೆ ವೈರ್‌ಲೆಸ್ ಚಾರ್ಜರ್

ಗುರುಮೂರ್ತಿ

ಸೋಮವಾರ, 12 ಫೆಬ್ರವರಿ 2018 (17:17 IST)
ಹೊಸ ಜನರೇಶನ್‌ಗೆ ತಕ್ಕಂತೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಆಪಲ್ ಸಂಸ್ಥೆ, ತನ್ನ ಉತ್ಪನ್ನಗಳಿಗೆ ವಾಯರ್ ರಹಿತ ಚಾರ್ಜರ್ ಬೆಂಬಲವನ್ನು ನೀಡಿದೆ ಎಂದು ಹೇಳಲಾಗುತ್ತಿದೆ. ಇದರಿಂದ ವಾಯರ್ ಚಾರ್ಜರ್ ಇಲ್ಲದೇ ನಿಮ್ಮ ಆಪಲ್ ಫೋನ್ ಅನ್ನು ನೀವು ಚಾರ್ಜ್ ಮಾಡಬಹುದಾಗಿದೆ.
ಈಗಾಗಲೇ ಕೆಲವು ಆಂಡ್ರೊಯ್ಡ್ ಸ್ಮಾರ್ಟ್‌ಪೋನ್‌ಗಳಲ್ಲಿ ನಾವು ಈ ವಾಯರ್ ರಹಿತ ಚಾರ್ಚಿಂಗ್ ಬೆಂಬಲವನ್ನು ಕಾಣಬಹುದಾಗಿದೆ. ಅದೇ ರೀತಿಯಲ್ಲಿ ಆಪಲ್ ಕೂಡಾ ತನ್ನ ಇತ್ತೀಚಿನ ಮಾದರಿಯ ಫೋನ್‌ಗಳಲ್ಲಿ ಈ ಬೆಂಬಲವನ್ನು ಅಳವಡಿಸಿದ್ದು ಅಷ್ಟೇ ಅಲ್ಲ ತನ್ನದೇ ಬ್ರಾಂಡ್ ವೈರ್‌ಲೆಸ್ ಚಾರ್ಜರ್ ಪ್ಯಾಡ್ ಅನ್ನು ಬಿಡುಗಡೆ ಮಾಡಲಿದೆ.
 
ಆಪಲ್ ಸಂಸ್ಥೆ 2017 ರ ಈವೆಂಟ್‌ನಲ್ಲಿ ವಾಯರ್ ರಹಿತ ಚಾರ್ಜ್ ಪ್ಯಾಡ್ ಅನ್ನು ಬಿಡುಗಡೆ ಮಾಡುವ ಕುರಿತು ಅಸ್ಪಷ್ಟವಾದ ಹೇಳಿಕೆ ನೀಡಿತ್ತಾದರೂ, ಈಗ ಅದನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ ಎಂಬ ವದಂತಿಗಳು ಕೇಳಿ ಬಂದಿವೆ. ಅಷ್ಟೇ ಅಲ್ಲ ಮೂಲಗಳ ಪ್ರಕಾರ  ವೈರಲ್‌ಲೆಸ್ ಚಾರ್ಚರ್ ಪ್ಯಾಡ್ ಅನ್ನು 2018 ರ ಮಾರ್ಚ್‌ನಲ್ಲಿ ಬಿಡುಗಡೆಮಾಡುವ ಸಾಧ್ಯತೆ ಇದ್ದು, ಇದರ ಮೂಲಕ ಆಪಲ್ ಸ್ಮಾರ್ಟ್‌ಫೋನ್, ಆಪಲ್ ವಾಚ್‌, ಏರ್‌ಪೊಡ್‌ಗಳಿಗೂ ಸುಲಭವಾಗಿ ಚಾರ್ಚ್ ಮಾಡಬಹುದಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದರ ಬೆಲೆಯು $199 ಡಾಲರ್ ಇರಬಹುದು ಎನ್ನಲಾಗಿದ್ದು ಮಾರ್ಚ್‌ ತಿಂಗಳ ನಂತರ ಆಪಲ್‌ನ ಅಧಿಕೃತ ಅಂಗಡಿಗಳಲ್ಲಿ ಈ ವಾಯಲ್ ರಹಿತ ಚಾರ್ಜರ್ ಪ್ಯಾಡ್ ಲಭ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ