ಶ್ವಾಸಕೋಶದ ಸೇಫ್ಟಿಗೆ ಇಷ್ಟು ಮಾಡಿ ಸಾಕು!

ಭಾನುವಾರ, 31 ಡಿಸೆಂಬರ್ 2017 (09:51 IST)
ಬೆಂಗಳೂರು: ಶ್ವಾಸಕೋಶ ನಮ್ಮ ದೇಹದ ಉಸಿರು. ಇದನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಶ್ವಾಸಕೋಶದ ಆರೋಗ್ಯಕ್ಕಾಗಿ ನಾವು ಮಾಡಬೇಕಾಗಿರುವುದು ಅಷ್ಟೇ. ನಿಯಮಿತವಾಗಿ ಆಪಲ್ ಮತ್ತು ಟೊಮೆಟೋ ಸೇವಿಸಿ ಸಾಕು!
 

ಇತ್ತೀಚೆಗಿನ ಅಧ್ಯಯನ ವರದಿಯೊಂದರ ಪ್ರಕಾರ ಹೊಗೆ ಅಥವಾ ಧೂಮಪಾನಿಗಳು ತಮ್ಮ ಶ್ವಾಸಕೋಶಕ್ಕೆ ಮಾಡುವ ಹಾನಿಯಿಂದ ಶ್ವಾಸಕೋಶದ ಆರೋಗ್ಯ ಮರಳಿ ಪಡೆಯಲು ಆಪಲ್ ಮತ್ತು ಟೊಮೆಟೋ ಸೇವಿಸಿದರೆ ಸಾಕು. ಇವೆರಡೂ ನಮ್ಮ ಶ್ವಾಸಕೋಶದ ಸಾಮರ್ಥ್ಯ ಕುಂದದಂತೆ ನೋಡಿಕೊಳ್ಳುತ್ತದೆ.

ಆಪಲ್ ತಿನ್ನುವುದರಿಂದ ಖಾಯಿಲೆಗಳಿಂದ ದೂರವಾಗುವಂತೆ, ಪ್ರತಿ ನಿತ್ಯ ಎರಡು ಟೊಮೆಟೋ ಸೇವಿಸಿದರು ಶ್ವಾಸಕೋಶ ಸದೃಢವಾಗಿರುತ್ತದೆ ಎಂದು ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ